Nagpur Bench, COVID-19
Nagpur Bench, COVID-19 
ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

Bar & Bench

ಖಾಸಗಿ ಕಂಪನಿಗಳು ತಮ್ಮ ಸಿಎಸ್ಆರ್ ಕರ್ತವ್ಯ ನಿರ್ವಹಿಸಲು ಇದಕ್ಕಿಂತ ಉತ್ತಮ ಅವಕಾಶವಿಲ್ಲ: ಬಾಂಬೆ ಹೈಕೋರ್ಟ್

ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಲಭ್ಯವಿರುವ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿ ಬಳಸುವುದಕ್ಕೆ ಸಂಬಂಧಿಸಿದಂತೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಖಾಸಗಿ ಕ್ಷೇತ್ರದ ಕಂಪೆನಿಗಳ ಬಗ್ಗೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಈಚೆಗೆ ಅಸಮಾಧಾನ ಹೊರಹಾಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕಂಪೆನಿಗಳ ಕಾಯಿದೆ 2013ರ ಸೆಕ್ಷನ್‌ 135ರ ಅಡಿ ಕಂಪೆನಿಗಳು ತಮ್ಮ ಶಾಸನಬದ್ಧ ಜವಾಬ್ದಾರಿ ನಿಭಾಯಿಸಲು ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ಪೀಠ ಹೇಳಿದೆ. “ಈ ಸಂಸ್ಥೆಗಳಿಗೆ ಶಾಸನಬದ್ಧ ಕರ್ತವ್ಯ ವಿಧಿಸಿದಾಗ ಈ ಕಂಪನಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಕರೆದಾಗಲೆಲ್ಲಾ ಅದನ್ನು ನಿರ್ವಹಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ನಮ್ಮ ಅಭಿಪ್ರಾಯದಲ್ಲಿ, ಅಂತಹ ಕರ್ತವ್ಯವನ್ನು ನಿರ್ವಹಿಸಲು ಪ್ರಸ್ತುತ ಸಮಯಕ್ಕಿಂತ ಉತ್ತಮವಾದ ಅವಕಾಶಗಳಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇದು ದೇಶದ ಜನರಿಗೆ ಜಾರ್ಜ್‌ ಫ್ಲಾಯ್ಡ್‌ ಕ್ಷಣವಾಗಿದೆ: ಆಮ್ಲಜನಕ ಕೊರತೆಯ ಬಗ್ಗೆ ದೆಹಲಿ ಹೈಕೋರ್ಟ್‌ ಅಭಿಪ್ರಾಯ

“ನಮ್ಮ ದೇಶದ ಜನರಿಗೆ ಇದು ಜಾರ್ಜ್‌ ಫ್ಲಾಯ್ಡ್‌ ಕ್ಷಣದಂತಾಗಿದೆ (ಅಮೆರಿಕಾದ ಕಪ್ಪು ವರ್ಣ ಸಮುದಾಯಕ್ಕೆ ಸೇರಿದ್ದ ಫ್ಲಾಯ್ಡ್‌ನನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಬಲಪ್ರಯೋಗಿಸಿದ್ದರಿಂದ ಸಾವನ್ನಪ್ಪಿದ ಘಟನೆ ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು)” ಎಂದು ಶುಕ್ರವಾರ ದೆಹಲಿ ಹೈಕೋರ್ಟ್‌ ಹೇಳಿದೆ. ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಉಡುಗೊರೆಯಾಗಿ ಆಮದು ಮಾಡಿಕೊಂಡದಕ್ಕೆ ಶೇ. 12ರಷ್ಟು ಏಕೀಕೃತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಿಧಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸುವಾಗ ಪೀಠವು ಮೇಲಿನಂತೆ ಹೇಳಿದೆ.

Justices Talwant singh , Rajiv Shakdher

“ಈ ದೇಶದ ಜನರಿಗೆ ಇದು ಜಾರ್ಜ್‌ ಫ್ಲಾಯ್ಡ್‌ ಕ್ಷಣದಂತಾಗಿದೆ. ವ್ಯತ್ಯಾಸವೆಂದರೆ, ನಾನು ಉಸಿರಾಡಲಾಗುತ್ತಿಲ್ಲ ಎನ್ನುವುದು ಇಲ್ಲಿ ವಿಭಿನ್ನ ಪರಿಸ್ಥಿತಿ ಮತ್ತು ಸನ್ನಿವೇಶದಲ್ಲಿ ಮೂಡಿದೆ; ಆದರೂ ಇದು, ಹೆಚ್ಚು ಭಯಾನಕ ಮತ್ತು ಭೀಕರ. ಕರುಣೆಯೇ ಇಲ್ಲದ ಕೊರೊನಾ ವೈರಸ್‌ನಿಂದಾಗಿ ಜನರು ಹತಾಶೆ ಮತ್ತು ನಿರಾಸೆಗೆ ಒಳಗಾಗಿದ್ದಾರೆ” ಎಂದು ನ್ಯಾಯಮೂರ್ತಿಗಳಾದ ರಾಜೀವ್‌ ಶಖ್ದೇರ್‌ ಮತ್ತು ತಲವಂತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ದೆಹಲಿಯಲ್ಲಿ ಮಾತ್ರವಲ್ಲದೆ ದೇಶದ ಎಲ್ಲಾ ಭಾಗಗಳಲ್ಲಿಯೂ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಕೊರತೆಯಿದೆ ಎಂಬ ಅಂಶವನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಇದರ ಪರಿಣಾಮವಾಗಿ ಜನರು ಆಮ್ಲಜನಕ ಸಿಲಿಂಡರ್‌ಗಳು ಮತ್ತು ಆಮ್ಲಜನಕ ಸಾಂದ್ರತೆಗಳ ಖರೀದಿಗೆ ಮುಂದಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು.