Supreme Court
Supreme Court 
ಸುದ್ದಿಗಳು

ರಾಜಕೀಯ ವಿರೋಧಿಗಳು ದಾಖಲಿಸಿದ್ದಾರೆ ಎಂದ ಮಾತ್ರಕ್ಕೆ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲಾಗದು: ಸುಪ್ರೀಂ [ಚುಟುಕು]

Bar & Bench

ರಾಜಕೀಯ ವಿರೋಧಿಗಳು ದಾಖಲಿಸಿದ್ದಾರೆ ಎನ್ನುವ ಏಕೈಕ ಆಧಾರದಲ್ಲಿ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಲಾಗದು ಎನ್ನುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ [ರಾಮ್‌ವೀರ್ ಉಪಾಧ್ಯಾಯ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ].

ಉತ್ತರ ಪ್ರದೇಶದ ಹಾಥ್‌ರಸ್‌ನ ಸದಾಬಾದ್ ಕ್ಷೇತ್ರದ ಮಾಜಿ ಶಾಸಕ ರಾಮ್‌ವೀರ್‌ ಉಪಾಧ್ಯಾಯ ಅವರು ತಮ್ಮ ರಾಜಕೀಯ ವಿರೋಧಿಯ ಕೆಲಸಗಾರನನ್ನು ಜಾತಿ ನಿಂದನೆ ಮಾಡಿದ್ದ ಆರೋಪ ಹೊತ್ತಿದ್ದರು. ಈ ಪ್ರಕರಣವು ತಮ್ಮ ರಾಜಕೀಯ ವಿರೋಧಿಗಳ ಚಿತಾವಣೆಯಿಂದ ದಾಖಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್‌ ರದ್ದುಪಡಿಸಲು ಕೋರಿ ರಾಮ್‌ವೀರ್‌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎ ಎಸ್‌ ಬೋಪಣ್ಣ ಅವರ ನೇತೃತ್ವದ ಪೀಠವು ಮೇಲಿನಂತೆ ಆದೇಶಿಸಿತು.

ಉಪಾಧ್ಯಾಯ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾರಿಯಾಗಿದ್ದ ಸಮನ್ಸ್ ರದ್ದುಪಡಿಸಲು ಕೋರಿ ಉಪಾಧ್ಯಾಯ ಅವರು ಅಲಾಬಾಹಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಹೈಕೊರ್ಟ್‌ ಅವರ ಮನವಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದಿದೆ.