High Court of Jammu & Kashmir, Srinagar
High Court of Jammu & Kashmir, Srinagar  
ಸುದ್ದಿಗಳು

ಕಂಪೆನಿಯನ್ನು ಆರೋಪಿಯನ್ನಾಗಿಸದೆ ಅದರ ಪದಾಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡುವಂತಿಲ್ಲ: ಕಾಶ್ಮೀರ ಹೈಕೋರ್ಟ್

Bar & Bench

ಪದಾಧಿಕಾರಿಗಳ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದಾಗ ಕಂಪೆನಿಯನ್ನು ಆರೋಪಿಯನ್ನಾಗಿ ನ್ಯಾಯಾಲಯಕ್ಕೆ ಹಾಜರುಪಡಿಸದ ಹೊರತು ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ವಿಚಾರಣೆ ಆರಂಭಿಸುವಂತಿಲ್ಲ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸಂದೀಪ್ ಸಿಂಗ್ ಮತ್ತಿತರರು ಹಾಗೂ ನಿಸಾರ್ ಅಹ್ಮದ್ ದಾರ್ ನಡುವಣ ಪ್ರಕರಣ].

ಕೇಂದ್ರಾಡಳಿತ ಪ್ರದೇಶದ ಅನಂತನಾಗ್‌ನಲ್ಲಿ ನಿಸಾರ್ ಅಹ್ಮದ್ ದರ್ ಎಂಬುವವರಿಗೆ ₹ 3 ಕೋಟಿ ವಂಚಿಸಿದ ಆರೋಪದ ಮೇಲೆ ಐಜೆನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್‌ನ ಪದಾಧಿಕಾರಿಗಳ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ನ್ಯಾಯಮೂರ್ತಿ ಸಂಜಯ್ ಧರ್ ಅವರಿದ್ದ ಏಕಸದಸ್ಯ ಪೀಠ ರದ್ದುಗೊಳಿಸಿತು.

ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಮೂರು ವರ್ಷದಲ್ಲಿ ಹಣ ದ್ವಿಗುಣಗೊಳಿಸಿಕೊಡುವುದಾಗಿ ಮತ್ತು ಬೋನಸ್‌ ನೀಡುವುದಾಗಿ ತಿಳಿಸಿ ನಿಸಾರ್ ಅಹ್ಮದ್ ದರ್ ಎಂಬುವವರಿಗೆ ₹ 3 ಕೋಟಿ ವಂಚಿಸಿದ ವಂಚಿಸಿದ ಪ್ರಕರಣ ಇದು. ಕಂಪೆನಿಯನ್ನು ಆರೋಪಿಯನ್ನಾಗಿಸದೆ ಅದರ ಪದಾಧಿಕಾರಗಳ ವಿರುದ್ಧ ಮೊಕದ್ದಮೆ ಹೂಡುವಂತಿಲ್ಲ, ಅಲ್ಲದೆ ತಾವು ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ವಾಸಿಸುತ್ತಿರುವುದರಿಂದ ನ್ಯಾಯಾಲಯ ಪ್ರಕರಣದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸುವಂತಿಲ್ಲ ಎಂಬುದು ಪದಾಧಿಕಾರಿಗಳ ವಾದವಾಗಿತ್ತು.

“ವಾದಗಳನ್ನು ಆಲಿಸಿದ ನ್ಯಾಯಾಲಯ "ಕಂಪನಿ ಪದಾಧಿಕಾರಿಗಳ ಮೇಲೆ ದೋಷಪೂರಿತ ಹೊಣೆ ಹೊರಿಸುವ ಯಾವುದೇ ನಿಯಮಾವಳಿಯನ್ನು ದಂಡ ಸಂಹಿತೆ ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಕಂಪನಿಯ ಪದಾಧಿಕಾರಿಗಳ ವಿರುದ್ಧ ನಿರ್ದಿಷ್ಟ ಆರೋಪಗಳಿಲ್ಲದಿದ್ದಾಗ ಮತ್ತು ಕಂಪನಿಯನ್ನು ಆರೋಪಿಯನ್ನಾಗಿ ಮಾಡದಿದ್ದಾಗ, ಅದರ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ಸಾಧ್ಯವಿಲ್ಲ,” ಎಂದು ನ್ಯಾಯಾಲಯ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Sandeep_Singh_v__Nisar_Ahmad_Dar.pdf
Preview