ತಮ್ಮ ಅಮೆರಿಕ ಪ್ರಯಾಣಕ್ಕೆ ತಡೆಯೊಡ್ಡಿರುವುದನ್ನು ಪ್ರಶ್ನಿಸಿ ಸರ್ಕಾರೇತರ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಸಿಬಿಐ ಪ್ರತಿಕ್ರಿಯೆ ಕೇಳಿದೆ.
ತಮ್ಮ ಕಕ್ಷಿದಾರ ಆಕಾರ್ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಅಮಾನತುಗೊಳಿಸುವಂತೆ ಕೋರಿ ವಕೀಲ ತನ್ವೀರ್ ಅಹ್ಮದ್ ಮೀರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಸಂಕ್ಷಿಪ್ತವಾಗಿ ಆಲಿಸಿತು. ಸಾರ್ವಜನಿಕ ಸೇವಕರು ತಮ್ಮ ಕಾರ್ಯ ಸಮರ್ಥಿಸಿಕೊಳ್ಳಬೇಕೇ ವಿನಾ ತಮ್ಮ"ಬಯಕೆ ಮತ್ತು ಕಲ್ಪನೆಯಂತೆ" ನಡೆಯವುದಲ್ಲ ಎಂದು ಅದು ಇದೇ ವೇಳೆ ಮೌಖಿಕವಾಗಿ ಹೇಳಿತು.
ಅಮೆರಿಕಕ್ಕೆ ಪ್ರಯಾಣ ಕೈಗೊಳ್ಳದಂತೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಆಕಾರ್ ಅವರನ್ನು ತಡೆಯಲಾಗಿತ್ತು. ಉಪನ್ಯಾಸ ನೀಡುವಂತೆ ತಮಗೆ ಅಮೆರಿಕದ ಹಲವು ಸಂಸ್ಥೆಗಳಿಂದ ಆಹ್ವಾನ ಬಂದಿತ್ತು ಎಂದು ಆಕಾರ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.