Sunita Kejriwal
Sunita Kejriwal  Twitter
ಸುದ್ದಿಗಳು

ಎರಡು ವೋಟರ್ ಐಡಿ ಹೊಂದಿದ ಆರೋಪ: ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾಗೆ ದೆಹಲಿ ನ್ಯಾಯಾಲಯ ಸಮನ್ಸ್

Bar & Bench

ಎರಡು ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಮೂಲಕ 1951ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯು ಇತ್ತೀಚೆಗೆ ಸಮನ್ಸ್ ಜಾರಿ ಮಾಡಿದೆ.

ದೆಹಲಿ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಸಲ್ಲಿಸಿದ್ದ ಮನವಿ ಮೇರೆಗೆ ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರ್ಜಿಂದರ್ ಕೌರ್ ಈ ಆದೇಶ ನೀಡಿದ್ದಾರೆ.

ಸುನಿತಾ ಅವರ ವಿರುದ್ಧ ಮೇಲ್ನೋಟದ ಪ್ರಕರಣ ಇದೆ. ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷಾರ್ಹ ಕೃತ್ಯ ಎಸಗಿದ ಆಪಾದನೆಗಾಗಿ ಆರೋಪಿಗೆ ಸಮನ್ಸ್‌ ಜಾರಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ವಿಚಾರಣೆ ನವೆಂಬರ್ 18, 2023 ರಂದು ಆರಂಭವಾಗಲಿದೆ.

ಸಾಹಿಬಾಬಾದ್ ಮತ್ತು ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸುನೀತಾ ಕೇಜ್ರಿವಾಲ್ ಅವರ ಹೆಸರಿದೆ ಎಂದು ಬಿಜೆಪಿ ನಾಯಕ ಹರೀಶ್ ಖುರಾನಾ 2019ರಲ್ಲಿ ದೂರು ದಾಖಲಿಸಿದ್ದರು. ಸುನೀತಾ ಅವರು ಎಸಗಿದ ಕೃತ್ಯ ಕಾಯಿದೆಯ ಸೆಕ್ಷನ್ 17 ಅನ್ನು ಉಲ್ಲಂಘಿಸುತ್ತದೆ ಎಂದು ಅವರು ಆರೋಪಿಸಿದ್ದರು.  ಸುಳ್ಳು ಘೋಷಣೆ ಮಾಡಿದ್ದಕ್ಕಾಗಿ ಕಾಯಿದೆಯ ಸೆಕ್ಷನ್ 31ರ ಅಡಿ ಕೂಡ ಸುನೀತಾ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ವಾದಿಸಲಾಗಿತ್ತು.