Suresh Chavhanke, Sudarshan news
ʼಬಿಂದಾಸ್ ಬೋಲ್ʼ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಕೆಲಸವನ್ನು ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಸುರೇಶ ಚವ್ಹಾಣ್ಕೆ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕ್ರಿಮಿನಲ್ ದೂರನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಸಂಜ್ಞೇಯ ಪರಿಗಣನೆಗೆ ತೆಗೆದುಕೊಂಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ. ರೋಹಿಣಿ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಪಾಲ್ ಕೃಷ್ಣನ್ ಅವರು ಈ ಕುರಿತು ಆದೇಶಿಸಿದ್ದು, ಕ್ರಿಮಿನಲ್ ದೂರಿನಲ್ಲಿರುವಂತೆ ಪೊಲೀಸರು ಯಾವುದಾದರೂ ಸಂಜ್ಞೇಯ ಅಪರಾಧವನ್ನು ಪರಿಗಣಿಸಿದ್ದಾರೆಯೇ, ಹಾಗಿದ್ದರೆ ಏನು ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ನೀಡುವಂತೆ ನಿರ್ದೇಶಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.