A Raja; 2G Appeals before Delhi HC
A Raja; 2G Appeals before Delhi HC 
ಸುದ್ದಿಗಳು

2ಜಿ ಪ್ರಕರಣದಲ್ಲಿ ತುರ್ತು ವಿಚಾರಣೆ ಕೋರಿಕೆಗೆ ದೆಹಲಿ ಹೈಕೋರ್ಟ್ ಅಸ್ತು; ಅ.5ರಿಂದ ದಿನಂಪ್ರತಿ ವಿಚಾರಣೆ

Bar & Bench

2ಜಿ ತರಂಗಾಂತರ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಎಲ್ಲಾ ಆರೋಪಿಗಳ ವಿರುದ್ಧದ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ವಿಶೇಷ ಮನವಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದ್ದು, ವಿಚಾರಣೆಗೆ ನಿರ್ಧರಿಸಿದೆ (ಇ.ಡಿ ವರ್ಸಸ್ ರಾಜಾ ಮತ್ತು ಇತರರು).

ಅಕ್ಟೋಬರ್ 5ರಿಂದ ವಿಶೇಷ ಅನುಮತಿ ಅರ್ಜಿಯನ್ನು ದಿನ ನಿತ್ಯ ಆಲಿಸುವುದಾಗಿ ನ್ಯಾಯಮೂರ್ತಿ ಬ್ರಿಜೇಸ್ ಸೇಥಿ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.

ನ್ಯಾ. ಸೇಥಿ ಅವರು 2020ರ ನವೆಂಬರ್‌ನಲ್ಲಿ ನಿವೃತ್ತ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಬೇಕಿರುವುದರಿಂದ ತ್ವರಿತವಾಗಿ ವರ್ಚುವಲ್ ವಿಚಾರಣೆ ನಡೆಸುವಂತೆ ಸಿಬಿಐ ಮತ್ತು ಇ.ಡಿ ಕೋರಿಕೆ ಸಲ್ಲಿಸಿವೆ. ಸಾರ್ವಜನಿಕ ಹಿತಾಸಕ್ತಿ ಮತ್ತು ನ್ಯಾಯಾಂಗದ ಸಮಯ ಉಳಿಸುವ ಉದ್ದೇಶದಿಂದ ಈಗಾಗಲೇ ವಿಚಾರಣೆ ನಡೆಸಲು ನಿರ್ಧರಿಸಲಾಗಿರುವ ಅಕ್ಟೋಬರ್ 12ಕ್ಕೆ ಬದಲಾಗಿ ಇನ್ನಷ್ಟು ಮುಂಚಿತವಾಗಿ ಪ್ರಕರಣದ ನಡೆಸಬೇಕು ಎಂದು ತನಿಖಾ ಸಂಸ್ಥೆಗಳ ಪರ ವಾದಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಮನವಿ ಮಾಡಿದ್ದರು.

ನಿರಪರಾಧಿಗಳು ಎಂದು ಘೋಷಿಲ್ಪಿಟ್ಟಿರುವ ಎ ರಾಜಾ ಮತ್ತು ಕೆ ಕನಿಮೋಳಿ ಅವರು ತನಿಖಾ ಸಂಸ್ಥೆಗಳ ವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್‌ಗಳು ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿವೆ. ಈ ಪ್ರಕರಣಗಳಲ್ಲಿನ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಸದರಿ ಪ್ರಕರಣದಲ್ಲಿ ಆತುರ ತೋರುವ ಅಗತ್ಯವಿಲ್ಲ ಎಂದಿದ್ದರು. ಈಗಾಗಲೇ ನಿರ್ಧಾರವಾಗಿರುವ ದಿನಾಂಕವನ್ನು ನ್ಯಾಯಮೂರ್ತಿ ನಿವೃತ್ತರಾಗುತ್ತಾರೆ ಎಂಬ ಕಾರಣಕ್ಕೆ ಮುಂಚಿತವಾಗಿ ನಡೆಸಲಾಗದು ಎಂದೂ ಅವರು ವಾದಿಸಿದ್ದಾರೆ.

ಇನ್ನೂ ಹಲವು ಗಂಭೀರ ವಿಚಾರಗಳ ಬಗ್ಗೆ ಈ ನ್ಯಾಯಾಲಯ ಗಮನ ನೀಡಬೇಕಿದೆ ಎಂದು ಪ್ರತಿವಾದಿಗಳ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಾಕಷ್ಟು ಶ್ರಮ ತೆಗೆದುಕೊಂಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಅಪರಾಧಿಗಳು ಜೈಲಿನಲ್ಲಿ ಸೊರಗುತ್ತಿದ್ದು, ಅವರ ಮನವಿಗಳನ್ನು ಆಲಿಸಿ, ನಿರ್ಧಾರ ಕೈಗೊಳ್ಳಬೇಕಿದೆ. ತಿಳಿವಳಿಕಸ್ಥ ವಕೀಲರು ತಮ್ಮ ಪ್ರಕರಣವಲ್ಲದೇ ಬೇರೆ ಆರೋಪಿಗಳು ಜೈಲಿನಲ್ಲಿರುವ ಪ್ರಕರಣಗಳ ವಿಲೇವಾರಿಯ ಕುರಿತೂ ಗಮನ ಹೊಂದಿದ್ದಾರೆ. ಆ ಪ್ರಕರಣಗಳ ವಿಚಾರಣೆ ನಡೆಸುವ ಕುರಿತು ನ್ಯಾಯಾಲಯಕ್ಕೆ ತನ್ನ ಕರ್ತವ್ಯದ ಪ್ರಜ್ಞೆ ಇದೆ. ಈ ಪ್ರಕರಣದಲ್ಲಿ ವಿಭಾಗೀಯ ಪೀಠ ವಿಚಾರಣೆ ನಡೆಸುವುದರ ಜೊತೆಗೆ ಜೈಲಿನಲ್ಲಿರುವ ಅಪರಾಧಿಗಳ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.
ನ್ಯಾ. ಬ್ರಿಜೇಸ್ ಸೇಥಿ

“... ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಪ್ರಕರಣದ ದಾಖಲೆ ಅಗಾಧವಾಗಿದ್ದು, ವಾದ ಮಾಡಲಾಗದು ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗದು ಎಂಬುದನ್ನು ಒಪ್ಪಲು ಕಷ್ಟ” ಎಂದು ಇದೇ ಸಂದರ್ಭದಲ್ಲಿ ಪೀಠವು ಹೇಳಿತು.

“... ತುರ್ತು ವಿಚಾರಣೆ ಕೋರಿ ತಡವಾಗಿ ಮನವಿ ಸಲ್ಲಿಸಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ; ದಾಖಲೆಗಳು ಅಗಾಧವಾಗಿವೆ ಎಂಬುದರಲ್ಲೂ ಅನುಮಾನವಿಲ್ಲ; ಸಾಕ್ಷಿಗಳು ಸಾವಿರಾರು ಪುಟದಷ್ಟಿವೆ ಎಂಬುದರಲ್ಲೂ ಅನುಮಾನವಿಲ್ಲ; ಒಂದು ತೀರ್ಪು 1551 ಪುಟಕ್ಕೂ ಮೀರಿದ್ದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಹಾಗೆಂದ ಮಾತ್ರಕ್ಕೆ ಕ್ರಿಮಿನಲ್ ವಿಶೇಷ ಅರ್ಜಿಗಳ ವಿಚಾರಣೆಯನ್ನು ತಡವಾಗಿಸಬೇಕು ಎಂದಲ್ಲ. ನ್ಯಾಯಾಮೂರ್ತಿಗಳು ತಮ್ಮ ಕರ್ತವ್ಯ ನಿಭಾಯಿಸಬೇಕು ಮತ್ತು ಯಾವುದೇ ನಕಾರಾತ್ಮಕ ಚಿಂತನೆಗೆ ಒಳಗಾಗಬಾರದು ಎಂಬುದು ನ್ಯಾಯಿಕ ಶಿಸ್ತು. ಪೆನ್ನು ಹಿಡಿದುಕೊಂಡು ಸುಮ್ಮನೆ ಕೂರುವುದನ್ನು ಬಯಸಲಾಗದು ಮತ್ತು ದಾಖಲೆಗಳು ಅಗಾಧವಾಗಿದ್ದು, ಸೀಮಿತ ಕಾಲಾವಕಾಶ ಇರುವುದರಿಂದ ಪ್ರಕರಣದ ವಿಚಾರಣೆ ನಡೆಸಲಾಗದು ಎಂದು ಹೇಳಲಾಗದು.”
ನ್ಯಾ. ಬ್ರಿಜೇಸ್ ಸೇಥಿ

ಎ ರಾಜಾ ಅವರನ್ನು ವಕೀಲ ಮನು ಶರ್ಮಾ, ಕೆ ಕನಿಮೋಳಿ ಮತ್ತು ಸಂಜಯ್ ಚಂದ್ರ ಅವರನ್ನು ವಕೀಲರಾದ ತರನ್ನುಮ್ ಚೀಮಾ, ಶಾಹಿದ್ ಬಲ್ವಾ, ಆಸೀಫ್ ಬಲ್ವಾ ಮತ್ತಿತರರನ್ನು ವಕೀಲ ವಿಜಯ್ ಅಗರ್ವಾಲ್ ಪ್ರತಿನಿಧಿಸಿದ್ದರು. ಶರದ್ ಕುಮಾರ್ ಅವರನ್ನು ವಕೀಲ ಆರ್ ಬಾಲಾಜಿ ಪ್ರತಿನಿಧಿಸಿದ್ದರು.

ವಕೀಲರಾದ ಸಿದ್ಧಾರ್ಥ್ ಅಗರ್ವಾಲ್, ಡಿ ಪಿ ಸಿಂಗ್, ಮನಾಲಿ ಸಿಂಘಾಲ್, ಜೆ ಅರಿಸ್ಟಾಟಲ್, ವೇದಾಂತ ವರ್ಮಾ, ವರುಣ್ ಶರ್ಮಾ, ಸಾಹಿಲ್ ಮೋದಿ ಅವರು ಇತರ ಆರೋಪಿಗಳ ಪರ ಹಾಜರಿದ್ದರು. ಹಿರಿಯ ವಕೀಲ ದಯಾನ್ ಕೃಷ್ಣನ್ ಹಾಗೂ ವಕೀಲ ಅರ್ಷದೀಪ್ ಸಿಂಗ್ ಅವರು ರವಿ ಕಾಂತ್ ರುಯಾ ಮತ್ತಿತರರನ್ನು ಪ್ರತಿನಿಧಿಸಿದ್ದರು. ಆದೇಶ ಓದಲು ಇಲ್ಲಿ ಕ್ಲಿಕ್ಕಿಸಿ.