Covid vaccine and Delhi HC

 
ಸುದ್ದಿಗಳು

ಕೋವಿಡ್ ಲಸಿಕೆಯಿಂದ ವಿನಾಯಿತಿ: ಶಿಕ್ಷಕರೊಬ್ಬರ ಅರ್ಜಿ ಆಲಿಸಲು ಒಪ್ಪಿದ ದೆಹಲಿ ಹೈಕೋರ್ಟ್ [ಚುಟುಕು]

Bar & Bench

ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಕೋವಿಡ್‌ ಲಸಿಕೆ ಕಡ್ಡಾಯ ಎಂಬ ನಿಯಮದಿಂದ ವಿನಾಯಿತಿ ನೀಡುವಂತೆ ಕೋರಿ ಶಿಕ್ಷಕರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ. ಈ ಸಂಬಂಧ, ದೆಹಲಿ ಸರ್ಕಾರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಮತ್ತು ದೆಹಲಿ ಪಬ್ಲಿಕ್ ಸ್ಕೂಲ್‌ಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. ಆರ್‌ ಎಸ್‌ ಭಾರ್ಗವ ಎಂಬ ಶಿಕ್ಷಕರು ಸಲ್ಲಿಸಿದ್ದ ಅರ್ಜಿಯಲ್ಲಿ ತಾವು ಸ್ವಯಂ ನಿರೋಧಕ ಕಾಯಿಲೆಯಿಂದ (ಆಟೊ ಇಮ್ಯೂನ್‌ ರೋಗ) ಬಳಲುತ್ತಿದ್ದು ಹೀಗಾಗಿ ಲಸಿಕೆ ತಗೆದುಕೊಳ್ಳುವುದರಿಂದ ವಿನಾಯ್ತಿ ನೀಡಲಾಗಿತ್ತು,. ಆದರೆ ನಂತರ ಇದನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಳ್ಳಲಾಯಿತು. ಅಲ್ಲದೆ ಆನ್‌ಲೈನ್‌ ತರಗತಿ ತೆಗೆದುಕೊಳ್ಳುವುದನ್ನೂ ನಿಷೇಧಿಸಲಾಯಿತು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.