Delhi High Court 
ಸುದ್ದಿಗಳು

ಕ್ರೀಡಾ ಸಂಹಿತೆ ಪಾಲಿಸುವವರೆಗೆ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಧನಸಹಾಯ ಬೇಡ: ದೆಹಲಿ ಹೈಕೋರ್ಟ್ [ಚುಟುಕು]

Bar & Bench

ಕ್ರೀಡಾ ಸಂಹಿತೆ ಮತ್ತು ನ್ಯಾಯಾಲಯ ಆದೇಶಗಳನ್ನು ಪಾಲಿಸದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್‌ಎಸ್‌ಎಫ್) ಧನಸಹಾಯ ಮತ್ತು ಪ್ರೋತ್ಸಾಹ ನಿಲ್ಲಿಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕಾನೂನು ಪಾಲಿಸಿದ ನಂತರವೇ ಈ ಒಕ್ಕೂಟಗಳಿಗೆ ಧನಸಹಾಯ ಮುಂದುವರೆಯಬೇಕು, ಈ ನಡುವೆ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮೂಲಕ ಕ್ರೀಡಾಪಟುಗಳಿಗೆ ಒದಗಿಸಲಾಗುತ್ತಿರುವ ಸಹಾಯವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಹೆಚ್ಚಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಕಾನೂನು ಪಾಲಿಸದ ಎನ್‌ಎಸ್‌ಎಫ್‌ಗಳ ಮಾನ್ಯತೆ ಅಮಾನತುಗೊಳಿಸುವುದನ್ನೂ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.