ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಸ್ಥಾಪಿಸಲಾದ ನ್ಯಾಯನಿರ್ಣಯ ಪ್ರಾಧಿಕಾರದಲ್ಲಿ (ಎಎ) ಖಾಲಿ ಇರುವ ಆಡಳಿತ, ಕಾನೂನು ಹಾಗೂ ಹಣಕಾಸು ಮತ್ತು ಲೆಕ್ಕಶಾಸ್ತ್ರ ವಿಭಾಗದ ಸದಸ್ಯ ಹುದ್ದೆಗಳನ್ನು ನಾಲ್ಕು ತಿಂಗಳೊಳಗೆ ಭರ್ತಿ ಮಾಡುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ಅಲೋಕ್ ಇಂಡಸ್ಟ್ರೀಸ್ ಮತ್ತು ಜಾರಿ ನಿರ್ದೇಶನಾಲಯ ಸಹಾಯಕ ನಿರ್ದೇಶಕರ ನಡುವಣ ಪ್ರಕರಣ] .
ಆಡಳಿತಾಧಿಕಾರಿ ಮತ್ತು ರಿಜಿಸ್ಟ್ರಾರ್ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಸೂಚಿಸಿದರು. ನ್ಯಾಯನಿರ್ಣಯ ಪ್ರಾಧಿಕಾರದಲ್ಲಿ ಹುದ್ದೆ ಖಾಲಿ ಇರುವ ಕುರಿತಾದ ಸ್ಥಿತಿಗತಿ ವರದಿ ಗಮನಿಸಿ ಅವರು ಈ ನಿರ್ದೇಶನ ನೀಡಿದರು.
ಹೆಚ್ಚಿನ ಮಾಹಿತಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ಜಾಲತಾಣದ ʼಲಿಂಕ್ʼ ಗಮನಿಸಿ.