Andhra Pradesh Chief Minister Jagan Mohan Reddy
Andhra Pradesh Chief Minister Jagan Mohan Reddy Facebook
ಸುದ್ದಿಗಳು

ವೈಎಸ್‌ಆರ್‌ ಕಾಂಗ್ರೆಸ್‌ ನೋಂದಣಿ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

Bar & Bench

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತು (ವೈಎಸ್‌ಆರ್‌) ಕಾಂಗ್ರೆಸ್‌ ಪಕ್ಷದ ನೋಂದಣಿ ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ಶುಕ್ರವಾರ ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ (ಅಣ್ಣಾ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ವರ್ಸಸ್‌ ಭಾರತೀಯ ಚುನಾವಣಾ ಆಯೋಗ).

ಅಣ್ಣಾ ವೈಎಸ್‌ಆರ್‌ ಪಕ್ಷ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತೀಕ್‌ ಜಲನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದ್ದು, ಅರ್ಜಿ ಯಾವುದೇ ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಆ ಹೆಸರನ್ನು ಬಳಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದ್ದರೂ ಪ್ರತಿವಾದಿಯು ಕಾನೂನುಬಾಹಿರ ಮತ್ತು ಅಕ್ರಮವಾಗಿ ತನ್ನ ಲೆಟರ್‌ಹೆಡ್‌ಗಳು, ಪ್ರಚಾರ ಸಾಮಗ್ರಿ ಮತ್ತು ಪಕ್ಷದ ಆಡಳಿತದಲ್ಲಿ ಅದನ್ನು ಬಳಸುತ್ತಿದೆ ಎಂಬುದು ಅರ್ಜಿದಾರರ ಅಹವಾಲಾಗಿತ್ತು.

ವೈಎಸ್‌ಆರ್‌ ಕಾಂಗ್ರೆಸ್‌, ಅಣ್ಣಾ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅವಿಭಾಜ್ಯ ಅಂಗವಾಗಿದ್ದು, ಅಧಿಕಾರದಲ್ಲಿರುವ ಜಗನ್‌ ನೇತೃತ್ವದ ಪಕ್ಷವು ಜಗತ್ತಿನ ಮುಂದೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅರ್ಜಿದಾರರ ವಾದಿಸಿದ್ದರು.

ಚುನಾವಣಾ ಆಯೋಗವು ಕಾನೂನುಬದ್ಧವಾಗಿ ನೀಡಿದ ನಿರ್ದೇಶನಗಳನ್ನು ಜಗನ್‌ ಅವರ ಪಕ್ಷವು ಸ್ಪಷ್ಟ, ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುತ್ತಿರುವುದು ಅಪರಾಧವಾಗಿದೆ. ಹೀಗಾಗಿ, ಚುನಾವಣಾ ಚಿಹ್ನೆಗಳ (ಕಾಯ್ದಿರಿಸುವುದು ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 16ಎ ಅಡಿ ವೈಎಸ್‌ಆರ್‌ ಕಾಂಗ್ರೆಸ್‌ನ ನೋಂದಣಿ ರದ್ದುಗೊಳಿಸಬೇಕು ಎಂದು ಕೋರಲಾಗಿತ್ತು.