VC in vest, Delhi High Court
VC in vest, Delhi High Court 
ಸುದ್ದಿಗಳು

ಬನಿಯನ್‌ ಧರಿಸಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ ₹10 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್

Bar & Bench

ಬನಿಯನ್‌ ಧರಿಸಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ ₹10 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್‌, ಇಂತಹ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದೆ (ಸೌರಭ್ ಗೋಗಿಯಾ ಇತರರು ಹಾಗೂ ಸರ್ಕಾರ ಇನ್ನಿತರರ ನಡುವಣ ಪ್ರಕರಣ).

ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯುತ್ತಿದ್ದರೂ ಅವರು ಸೂಕ್ತ ಧಿರಿಸಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಹೀಗಾಗಿ ಐದನೇ ಅರ್ಜಿದಾರರಿಗೆ ರೂ.10,000/- ದಂಡ ವಿಧಿಸಲಾಗಿದ್ದು ಒಂದು ವಾರದೊಳಗೆ ದೆಹಲಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಗೆ ಆ ಹಣ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಪತಿ ವಿರುದ್ಧ ಪತ್ನಿ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾ. ರಜನೀಶ್ ಭಟ್ನಾಗರ್ ನೇತೃತ್ವದ ಪೀಠದಲ್ಲಿ ನಡೆಯಿತು. ಕಕ್ಷಿದಾರರು ತಮ್ಮ ನಡುವಿನ ವ್ಯಾಜ್ಯ ಬಗೆಹರಿಸಿಕೊಂಡಿದ್ದು ಮದುವೆಯನ್ನು ರದ್ದುಗೊಳಿಸಲಾಗಿದೆ. ವಿವಾಹದಿಂದ ಜನಿಸಿದ ಹೆಣ್ಣುಮಗುವನ್ನು ಭೇಟಿಯಾಗಲು ತಂದೆಗೆ ಅವಕಾಶ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿದಾರರ ಪರ ವಕೀಲರು ತಿಳಿಸಿದರು. ಮಗುವಿನ ಯೋಗಕ್ಷೇಮದ ಬಗ್ಗೆ ತಿಳಿಸಲು ಅರ್ಜಿದಾರರಿಗೆ ಇಮೇಲ್ ಕಳುಹಿಸಬೇಕು ಎಂದು ಗಂಡನ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯವನ್ನು ಕೇಳಿದರು, ಅದಕ್ಕೆ ತಾಯಿ ಒಪ್ಪಿದರು.

ಮದುವೆಯ ನಂತರ ಹೆಣ್ಣು ಮಗು ಜನಿಸಿತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು, ಆದರೆ ತಂದೆಗೆ ಯಾವುದೇ ಭೇಟಿಯ ಹಕ್ಕುಗಳನ್ನು ನೀಡಲಾಗಿಲ್ಲ. ಮಗುವಿನ ಯೋಗಕ್ಷೇಮದ ಬಗ್ಗೆ ತಿಳಿಸಲು ಅರ್ಜಿದಾರರಿಗೆ ಇಮೇಲ್ ಕಳುಹಿಸಬೇಕು ಎಂದು ಗಂಡನ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯವನ್ನು ಕೇಳಿದರು, ಅದಕ್ಕೆ ತಾಯಿ ಒಪ್ಪಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಗುರುತ ಹಚ್ಚಲು ಅಗತ್ಯವಿದ್ದ ಕಾರಣಕ್ಕೆ ಐದನೇ ಅರ್ಜಿದಾರರೊಬ್ಬರು ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ಬನಿಯನ್‌ನಲ್ಲಿ ವರ್ಚುವಲ್‌ ವಿಚಾರಣೆಯಲ್ಲಿ ಪಾಲ್ಗೊಂಡಿದ್ದು ನ್ಯಾಯಾಲಯವನ್ನು ಕೆರಳಿಸಿತು.