ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ವಿಚ್ಛೇದಿತ ಪತ್ನಿ ಪಾಯಲ್ ಅವರಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ ₹1.5 ಲಕ್ಷ ನೀಡುವಂತೆ ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಇದಲ್ಲದೆ ಒಮರ್ ಅವರು ತಮ್ಮ ಇಬ್ಬರು ಪುತ್ರಂದಿರ ಶಿಕ್ಷಣಕ್ಕಾಗಿ ಮಾಸಿಕ ತಲಾ ₹ 60,000 ಪಾವತಿಸಬೇಕು ಎಂದು ನ್ಯಾ. ಸುಬ್ರಮೋಣಿಯಂ ಪ್ರಸಾದ್ ಅವರು ಸೂಚಿಸಿದರು. ಈ ಮೊತ್ತವು ಒಮ್ಮೆ ಒಮರ್ ಅವರ ಪುತ್ರರು ಕಾನೂನು ಶಿಕ್ಷಣಕ್ಕಾಗಿ ನೊಂದಾಯಿಸಿಕೊಂಡ ನಂತರ ಪದವಿ ಅವಧಿಯು ಮುಗಿಯುವವರೆಗೆ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ.
ವಿಚಾರಣಾ ನ್ಯಾಯಾಲಯವು ಈ ಮೊದಲು ಪಾಯಲ್ ಅಬ್ದುಲ್ಲಾಗೆ ಪ್ರತಿ ತಿಂಗಳು ₹ 75,000 ನೀಡಬೇಕು ಮತ್ತು ಮಕ್ಕಳಿಗೆ ₹ 25,000 ಮಧ್ಯಂತರ ಜೀವನಾಂಶ ಒದಗಿಸಬೇಕು ಎಂದು ಒಮರ್ ಅವರಿಗೆ ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಪಾಯಲ್ ಹೈಕೋರ್ಟ್ ಮೊರೆಹೋಗಿದ್ದರು. ಈ ಪರಿಹಾರ ಮೊತ್ತವನ್ನು ಹೈಕೋರ್ಟ್ ಗುರುವಾರ ಹೆಚ್ಚಿಸಿದೆ.