18 ಕಮ್ಯೂನ್
18 ಕಮ್ಯೂನ್ 
ಸುದ್ದಿಗಳು

ವಿರಾಟ್ ಕೊಹ್ಲಿ ಒಡೆತನದ ಒನ್8 ಕಮ್ಯೂನ್‌ ರೆಸ್ಟರಂಟ್‌ಗಳಲ್ಲಿ ಪಿಪಿಎಲ್ ಹಾಡು ಪ್ರಸಾರಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧ

Bar & Bench

ಫೋನೊಗ್ರಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ (ಪಿಪಿಎಲ್) ಹಕ್ಕುಸ್ವಾಮ್ಯ ಪಡೆದಿರುವ ಹಾಡುಗಳನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ರೆಸ್ಟೋರೆಂಟ್/ ಕೆಫೆ ಸಮೂಹ ಒನ್8 ಕಮ್ಯೂನ್‌ ಪ್ರಸಾರ ಮಾಡದಂತೆ ನಿರ್ಬಂಧಿಸಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ಹೊರಡಿಸಿದೆ.

ಮುಂದಿನ ವಿಚಾರಣೆ ದಿನದವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು ಪರವಾನಗಿ ಪಡೆಯದೆ ಪಿಪಿಎಲ್ ಹಾಡುಗಳನ್ನು ಒನ್8 ಕಮ್ಯೂನ್ ಪ್ರಸಾರ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಸಿ ಹರಿಶಂಕರ್ ಹೇಳಿದ್ದಾರೆ.

https://www.pplindia.org/songsನ ಯಾವುದೇ ಹಾಡುಗಳನ್ನು ಅಲ್ಲಿಯವರೆಗೆ ಬಳಸದಂತೆ ನ್ಯಾಯಾಲಯ ತಾಕೀತು ಮಾಡಿದೆ.

ಪರವಾನಗಿ ಪಡೆಯದೆ ರೆಸ್ಟರಂಟ್‌ ಮತ್ತು ಕೆಫೆಗಳಲ್ಲಿ ತನ್ನ ಹಾಡುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಒನ್ 8 ಕಮ್ಯೂನ್ ವಿರುದ್ಧ ಫೋನೊಗ್ರಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ಮೊಕದ್ದಮೆ ಹೂಡಿತ್ತು.

ಈ ಸಂಬಂಧ ಒನ್ 8 ಕಮ್ಯೂನ್‌ಗೆ ಲೀಗಲ್‌ ನೋಟಿಸ್‌ ನೀಡಲಾಗಿದ್ದರೂ ಅದು ಉತ್ತರಿಸಿಲ್ಲ ಎಂದು ಪಿಪಿಎಲ್‌ ದೂರಿತ್ತು.

ಪರವಾನಗಿ ಪಡೆಯದೆ ಪಿಪಿಎಲ್ ನ ಕೃತಿಸ್ವಾಮ್ಯ ಗೀತೆಗಳನ್ನು ಬಳಸುವುದಿಲ್ಲ ಎಂದು ಒನ್ 8 ಕಮ್ಯೂನ್ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾ. ಹರಿಶಂಕರ್‌ ಕಾನೂನಿನ ಸ್ಥಾನ ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು ಪಿಪಿಎಲ್ ಸಂಸ್ಥೆ ಹಾಡುಗಳ ಕೃತಿಸ್ವಾಮ್ಯ ಒಡೆಯನಾಗಿರುವುದರಿಂದ, ಪರವಾನಗಿ ಇಲ್ಲದೆ ಆ ಗೀತೆಗಳನ್ನು ಪ್ರಸಾರ ಮಾಡಲು ಬೇರೆ ಯಾರಿಗೂ ಅನುಮತಿ ಇಲ್ಲ ಎಂದು ಒತ್ತಿ ಹೇಳಿದರು. ನಂತರ ಪೀಠ ಮಧ್ಯಂತರ ಆದೇಶ ಹೊರಡಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Phonographic Performance Limited v Cornerstone Sport and Entertainment Private Limited & Ors.pdf
Preview