ಅಮಿತ್ ಪ್ರಸಾದ್ 
ಸುದ್ದಿಗಳು

ದೆಹಲಿ ಗಲಭೆ ಪ್ರಕರಣ: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದ ಅಮಿತ್ ಪ್ರಸಾದ್

ತಮ್ಮ ಖಾಸಗಿ ವೃತ್ತಿ ಮತ್ತು ದೆಹಲಿ ಗಲಭೆ ಪ್ರಕರಣಗಳ ನಡುವಿನ ಸಂಘರ್ಷ ಉಲ್ಲೇಖಿಸಿ ಕಳೆದ ತಿಂಗಳು ಪ್ರಸಾದ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

Bar & Bench

ದೆಹಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಪರ ವಾದಿಸುವುದಕ್ಕಾಗಿ ವಕೀಲ ಅಮಿತ್‌ ಪ್ರಸಾದ್‌ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದಿದ್ದಾರೆ.

ತಮ್ಮ ಖಾಸಗಿ ವೃತ್ತಿ ಮತ್ತು ದೆಹಲಿ ಗಲಭೆ ಪ್ರಕರಣಗಳ ನಡುವಿನ ಸಂಘರ್ಷ ಉಲ್ಲೇಖಿಸಿ ಕಳೆದ ತಿಂಗಳು ಪ್ರಸಾದ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಬಾರ್ & ಬೆಂಚ್ ಜೊತೆ ಮಾತನಾಡಿದ ಪ್ರಸಾದ್, ಸಮಸ್ಯೆಗಳಿಗೆ ಪರಿಹಾರ ದೊರೆತಿರುವುದರಿಂದ ರಾಜೀನಾಮೆ ಹಿಂಪಡೆದಿರುವುದಾಗಿ ತಿಳಿಸಿದರು.

"ದೆಹಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗ ಇನ್ನೂ ಇಬ್ಬರು ಪ್ರಾಸಿಕ್ಯೂಟರ್‌ಗಳು ಮತ್ತು ಸಂಪೂರ್ಣ ತಂಡ ಇರಲಿದೆ" ಎಂದು ಅವರು ಹೇಳಿದರು.

ವಿಶೇಷವೆಂದರೆ, ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಕೂಡ ಪ್ರಸಾದ್ ದೆಹಲಿ ಪೊಲೀಸರ ಎಸ್‌ಪಿಪಿ ಆಗಿದ್ದಾರೆ.

ಎಸ್‌ಪಿಪಿಯಾಗಿ, ಅಮಿತ್ ಪ್ರಸಾದ್ ದೆಹಲಿ ಗಲಭೆ ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆೆ) ಕಾಯಿದೆಯಡಿ ದಾಖಲಾದ ಪ್ರಮುಖ ಪಿತೂರಿ ಪ್ರಕರಣ, 85 ವರ್ಷದ ಅಕ್ಬರಿ ಬೇಗಂ ಅವರ ಕೊಲೆ ಪ್ರಕರಣ ಹಾಗೂ ಶಾರ್ಜಿಲ್‌ ಇಮಾಮ್ ವಿರುದ್ಧದ ದೇಶದ್ರೋಹ ಪ್ರಕರಣದಲ್ಲಿ ವಾದ ಮಂಡಿಸಿದ್ದರು.