<div class="paragraphs"><p>Umar Khalid, Karkardooma Court</p></div>

Umar Khalid, Karkardooma Court

 
ಸುದ್ದಿಗಳು

[ಚುಟುಕು] ವಿದೇಶಿ ಮಾಧ್ಯಮಗಳಲ್ಲಿ ಸರ್ಕಾರಕ್ಕೆ ಮುಜುಗರ ಮಾಡುವುದು ಖಾಲಿದ್‌, ಶಾರ್ಜಿಲ್ ಉದ್ದೇಶ ಎಂದ ಪ್ರಾಸಿಕ್ಯೂಷನ್

Bar & Bench

ಮಾಜಿ ಜೆಎನ್‌ಯು ವಿದ್ಯಾರ್ಥಿ ಮುಖಂಡರಾದ ಉಮರ್ ಖಾಲಿದ್‌ ಹಾಗೂ ಶಾರ್ಜೀಲ್ ಇಮಾಂ ಅವರ ದೆಹಲಿ ಪ್ರತಿಭಟನೆಗಳ ಹಿಂದಿನ ಉದ್ದೇಶ ಪೌರತ್ವ ತಿದ್ದುಪಡಿ ಕಾಯಿದೆ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯಾಗಿರಲಿಲ್ಲ. ಬದಲಿಗೆ ಇದರ ಮುಸುಕಿನಲ್ಲಿ ವಿದೇಶಿ ಮಾಧ್ಯಮಗಳಲ್ಲಿ ಸರ್ಕಾರವನ್ನು ಮುಜುಗರಕ್ಕೀಡು ಮಾಡುವುದಾಗಿತ್ತು ಎಂದು ದೆಹಲಿ ಗಲಭೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ವಾದಿಸಿದೆ.

ದೆಹಲಿಯ ಕಡಕಡಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಮಿತಾಬ್‌ ರಾವತ್ ಅವರ ಮುಂದೆ ಉಮರ್ ಖಾಲಿದ್‌ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ವಾದ ಮಂಡಿಸಿತು. ಖಾಲಿದ್‌ ಜಾಮೀನು ಮನವಿಯನ್ನು ಪ್ರಬಲವಾಗಿ ವಿರೋಧಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಮಿತ್‌ ಪ್ರಸಾದ್ ಅವರು ಖಾಲಿದ್‌ ಅಣತಿಯಂತೆ ಶಾರ್ಜಿಲ್‌ ಇಮಾಂ ನಡೆದುಕೊಳ್ಳುತ್ತಿದ್ದುದಾಗಿ ಆಪಾದಿಸಿದರು.

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.