<div class="paragraphs"><p>rioting</p></div>

rioting

 
ಸುದ್ದಿಗಳು

ಭೀತಿ ಮತ್ತು ಆಘಾತದಿಂದಾಗಿ ಜನ ಪೊಲೀಸರ ಬಳಿ ಹೋಗುವುದು ತಡವಾಯಿತು: ದೆಹಲಿ ಗಲಭೆ ಕುರಿತು ಸ್ಥಳೀಯ ನ್ಯಾಯಾಲಯ [ಚುಟುಕು]

Bar & Bench

ಆರೋಪಿಯೊಬ್ಬನ ವಿರುದ್ಧ ಗಲಭೆ ಮತ್ತಿತರ ಆರೋಪಗಳನ್ನು ನಿಗದಿಪಡಿಸಿದ ದೆಹಲಿಯ ನ್ಯಾಯಾಲಯವೊಂದು ದೆಹಲಿ ಗಲಭೆ ನಂತರ ಈಶಾನ್ಯ ಭಾಗದಲ್ಲಿ ಉಂಟಾದ ಭೀತಿ ಮತ್ತು ಆಘಾತದ ವಾತಾವರಣವು ಪೊಲೀಸರು ತಮ್ಮ ಹೇಳಿಕೆ ದಾಖಲಿಸಿಕೊಳ್ಳುವುದನ್ನು ತಡೆಯಿತು ಎಂದು ಹೇಳಿದೆ. "ಹಿಂಸಾಚಾರದವೇಳೆ ಹಲವು ಮುಗ್ಧ ಜೀವಗಳು ಇಲ್ಲವಾದವು. ಅನೇಕ ಮಂದಿ ನಿರಾಶ್ರಿತರಾದರು. ಹಲವು ಅಂಗಡಿ ಹಾಗೂ ವ್ಯಾಪಾರ ಕೇಂದ್ರಗಳು ಗಲಭೆಕೋರರಿಂದ ಬೂದಿಯಾದವು. ಗಲಭೆಗಳನ್ನು ನಿಯಂತ್ರಿಸಿದ ನಂತರವೂ ತಿಂಗಳುಗಟ್ಟಲೆ ಇಡೀ ಈಶಾನ್ಯ ದೆಹಲಿಯಲ್ಲಿ ಭಯ ಮತ್ತು ಆಘಾತದ ವಾತಾವರಣವಿತ್ತು” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಭಟ್ ತಿಳಿಸಿದರು.

ದೂರು ಸಲ್ಲಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಸಾಕ್ಷಿಗಳ ಹೇಳಿಕೆ ತಿರಸ್ಕರಿಸುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ತಿಳಿಸಿದ ನ್ಯಾಯಾಲಯ ಆರೋಪಿ ಜಾವೇದ್‌ ವಿರುದ್ಧ ಐಪಿಸಿ ಸೆಕ್ಷನ್‌ ಗಲಭೆ), 148 (ಮಾರಕ ಆಯುಧಗಳಿಂದ ಗಲಭೆ) ಅಡಿ ಆರೋಪ ನಿಗದಿಪಡಿಸಿತು. ಆದರೆ ಸೆಕ್ಷನ್ 307ರ (ಕೊಲೆ ಯತ್ನ) ಅಡಿ ಆರೋಪ ರೂಪಿಸಲು ನಿರಾಕರಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.