Satyendar Jain
Satyendar Jain  Facebook
ಸುದ್ದಿಗಳು

ಸತ್ಯೇಂದರ್‌ ಜೈನ್ ವಿಚಾರಣೆ ವೇಳೆ ವಕೀಲರ ಹಾಜರಿಗೆ ಅನುಮತಿ ನೀಡಿದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಇ ಡಿ

Bar & Bench

ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಅವರನ್ನು ವಿಚಾರಣೆ ನಡೆಸುವಾಗ ಸಚಿವರೊಂದಿಗೆ ವಕೀಲರು ಹಾಜರಿರಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

ಇ ಡಿ ಪರವಾಗಿ ವಕೀಲ ಜೊಹೆಬ್ ಹೊಸೈನ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಅವರೆದುರು ಮನವಿ ಪ್ರಸ್ತಾಪಿಸಿದರು.

"ಮೇ 31 ರಂದು ಜೈನ್ ಅವರನ್ನು ಇ ಡಿ ವಶಕ್ಕೆ ನೀಡಲಾಗಿದೆ. ವಕೀಲರು ಮತ್ತಿತರರು ಉಪಸ್ಥಿತಿರಿರಬೇಕು ಎಂಬಂತಹ ಕೆಲವು ಷರತ್ತುಗಳನ್ನು ಹಾಕಲಾಗಿದೆ. ಇದು ನಮಗೆ ನೀಡಲಾದ ಕಸ್ಟಡಿಗೆ ಧಕ್ಕೆ ತರುತ್ತದೆ" ಎಂದು ಹೊಸೈನ್ ಹೇಳಿದರು. ಶುಕ್ರವಾರ ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಸತ್ಯೇಂದ್ರ ಜೈನ್‌ ಅವರನ್ನು ಜೂನ್ 9ರವರೆಗೆ ಇ ಡಿ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಕಳೆದ ವಾರ ಆದೇಶ ನೀಡಿತ್ತು. ಆದರೆ ಜೈನ್‌ ಅವರ ವಿಚಾರಣೆ ನಡೆಯುವಾಗ ದೂರದಲ್ಲಿ ವಕೀಲರೊಬ್ಬರು ಉಪಸ್ಥಿತರಿಬೇಕು. ಅವರಿಗೆ ವಿಚಾರಣೆ ನಡೆಯುತ್ತಿರುವುದು ಕಾಣಬೇಕೆ ಹೊರತು ಕೇಳಬಾರದು ಎಂದು ವಕೀಲರ ಕೋರಿಕೆ ಮೇರೆಗೆ ನ್ಯಾಯಾಲಯ ಆದೇಶಿಸಿತ್ತು.