Supreme Court
Supreme Court 
ಸುದ್ದಿಗಳು

ಅಭ್ಯರ್ಥಿಗಳ ಆಯ್ಕೆಯ ಘೋಷಣೆ, ಅನುಮೋದನೆ ನಂತರ ಅವರು ಅಧಿಕಾರಗ್ರಹಣ ಮಾಡುವುದನ್ನು ತಡೆಯಲಾಗದು: ಸುಪ್ರೀಂ ಕೋರ್ಟ್‌

Bar & Bench

ಚುನಾವಣೆಯೊಂದರ ಫಲಿತಾಂಶವನ್ನು ಘೋಷಣೆ ಮಾಡಿ, ಅನುಮೋದಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ಅಧಿಕಾರಗ್ರಹಣ ಮಾಡದಂತೆ ತಡೆಯಲು ಯಾವುದೇ ಕಾರಣಗಳು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದೆ [ಹಿರೇನ್‌ ಜೆ ಥಕ್ಕರ್‌ ಮತ್ತು ಇತರರು ವರ್ಸಸ್‌ ಪರೂಲ್‌ ವಿ ಮೆಹ್ತಾ ಮತ್ತು ಇತರರು].

ಶ್ರೀ ಕೊಯಮತ್ತೂರು ಗುಜರಾತ್‌ ಸಮಾಜದ ಸಾಮಾನ್ಯ ಸಭೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಅಧಿಕಾರಗ್ರಹಣ ಮಾಡದಂತೆ ತಡೆದಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಯ್‌ ರಾಸ್ತೋಗಿ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ಪೀಠವು ಮೇಲಿನಂತೆ ಅಭಿಪ್ರಾಯಪಟ್ಟಿತು.

ನ್ಯಾಯಾಲಯವು ತನ್ನ ಆದೇಶದಲ್ಲಿ, "ಒಮ್ಮೆ ಚುನಾವಣೆಗಳು 27ನೇ ಮಾರ್ಚ್‌ 2022ರಂದು ನಡೆದು ಫಲಿತಾಂಶವನ್ನು ಘೋಷಿಸಿದ ನಂತರ ಚುನಾಯಿತ ವ್ಯಕ್ತಿಗಳು ಅಧಿಕಾರಗ್ರಹಣ ಮಾಡದಂತೆ ತಡೆಯಲು ಯಾವುದೇ ಕಾರಣಗಳು ಕಂಡುಬರುವುದಿಲ್ಲ ಎನ್ನುವುದು ನಮ್ಮ ಒಪ್ಪಿತ ನಿಲುವಾಗಿದೆ. ಪ್ರಕರಣದ ಅರ್ಹತೆಯ ಬಗ್ಗೆ ಚರ್ಚಿಸಲು ಹೋಗದೆ ಈ ನ್ಯಾಯಾಲಯವು ಚುನಾಯಿತ ಅಭ್ಯರ್ಥಿಗಳಿಗೆ ಅಧಿಕಾರಗ್ರಹಣ ಮಾಡಲು ಅನುಮತಿಸುತ್ತದೆ" ಎಂದು ತನ್ನ ಆದೇಶದಲ್ಲಿ ತಿಳಿಸಿದೆ.