Supreme Court, Election Commission 
ಸುದ್ದಿಗಳು

ತಾನು ಚುನಾವಣಾ ಆಯೋಗ ನಡೆಸುತ್ತಿಲ್ಲ ಎಂದ ಸುಪ್ರೀಂ: ಮತಗಟ್ಟೆ ಸಮೀಕ್ಷೆ ನಿಷೇಧಿಸುವಂತೆ ಕೋರಿದ್ದ ಅರ್ಜಿ ವಜಾ

ಇಂತಹ ವಿಚಾರಗಳನ್ನು ಪರಿಶೀಲಿಸುವುದು ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯವಾಗಿದ್ದು ಆಯೋಗದ ಕೆಲಸಗಳನ್ನು ತಾನು ನಡೆಸಬೇಕು ಎಂದು ನಿರೀಕ್ಷಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಮತಗಟ್ಟೆ ಸಮೀಕ್ಷೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಬಿಎಲ್ ಜೈನ್  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಇಂತಹ ವಿಚಾರಗಳನ್ನು ಪರಿಶೀಲಿಸುವುದು ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯವಾಗಿದ್ದು ಆಯೋಗದ ಕೆಲಸಗಳನ್ನು ತಾನ ನಡೆಸಬೇಕು ಎಂದು ನಿರೀಕ್ಷಿಸುವಂತಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಈಗಾಗಲೇ ಸರ್ಕಾರ ಚುನಾಯಿತಗೊಂಡಿದೆ. ಚುನಾವಣೆ ವೇಳೆ ಏನಾಗುತ್ತದೆ ಎಂಬುದನ್ನು ಬದಿಗಿಟ್ಟು ದೇಶದ ಆಡಳಿತ ನಡೆಯುವುದನ್ನು ನೋಡೋಣ. ಆ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತದೆ. ನ್ಯಾಯಾಲಯ ಚುನಾವಣಾ ಆಯೋಗವನ್ನು ನಡೆಸುವುದಿಲ್ಲ. ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ ಎನ್ನುವುದಕ್ಕೆ ಈ ಮೊಕದ್ದಮೆ ಸ್ಪಷ್ಟ ನಿದರ್ಶನ ಎಂದು ಸಿಜೆಐ ಈ ವೇಳೆ ನುಡಿದರು.

ಸಾಂವಿಧಾನಿಕ ಸಂಸ್ಥೆಯಾಗಿರುವ ಇಸಿಐ ಕಾರ್ಯನಿರ್ವಹಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮೇ ತಿಂಗಳಲ್ಲಿ ಹೇಳಿತ್ತು.

ಕೋಮುವಾದಿ ಭಾಷಣಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಈ ಪ್ರತಿಕ್ರಿಯೆ ನೀಡಿದ್ದರು .