Slums
Slums Image for representative purposes
ಸುದ್ದಿಗಳು

ಒತ್ತುವರಿ ಕೊಳಗೇರಿ ನಿವಾಸಿಗಳು ಉಚಿತ ವಸತಿಗೆ ಬೇಡಿಕೆ ಇರಿಸುತ್ತಾರೆ, ವೇತನದಾರರಿಗೆ ಇದಾವುದೂ ಇಲ್ಲ: ಬಾಂಬೆ ಹೈಕೋರ್ಟ್

Bar & Bench

ಒತ್ತುವರಿ ಪ್ರದೇಶದಲ್ಲಿ ಹಾಲಿ ನೆಲೆಸಿರುವ ಕೊಳಗೇರಿ ನಿವಾಸಿಗಳು ತಮಗೆ ಪರ್ಯಾಯ ಉಚಿತ ವಸತಿ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ಗೆ ಈಚೆಗೆ ಪ್ರತಿಕೂಲ ಅವಲೋಕನ ಮಾಡಿದೆ [ವೈಭವಿ ಎಸ್‌ಆರ್‌ಎ ಸಿಎಚ್‌ಎಸ್‌ ಲಿಮಿಟೆಡ್‌ ವರ್ಸಸ್‌ ಮಹಾರಾಷ್ಟ್ರ ಸರ್ಕಾರ ಮತ್ತು ಇತರರು].

ನಗರದಲ್ಲಿ ನೆಲೆಸಿರುವ ವೇತನದಾರರು ಸಹ ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ, ಅದರೆ ಅವರಿಗೆ ಇಂತಹ ಪರಿಹಾರ ದೊರೆಯುವುದಿಲ್ಲ ಎಂದು ವೈಭವಿ ಎಸ್‌ಆರ್‌ಎ ಸಹಕಾರ ಗೃಹ ಸೊಸೈಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ಎಸ್‌ ಪಟೇಲ್‌ ಮತ್ತು ಕಮಲ್‌ ಖಾಟಾ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ನ್ಯಾಯಾಲಯದ ಮುಂದಿರುವ ಕೊಳಗೇರಿ ನಿವಾಸಿಗಳು ಇಂಥ ಬೇಡಿಕೆ ಇಡುವ ಸ್ಥಿತಿಯಲ್ಲಿದ್ದು, ಇದು ವಿಷಯವೇ ಅಲ್ಲ. ಇದೊಂದು ವಿಚಾರವಾಗಲೂ ಬಾರದು. ಯಾರಿಗಾದರೂ, ಕಾನೂನಿನ ನ್ಯಾಯಾಲಯಕ್ಕಾದರೂ ಸರಿಯೇ, ನಗರದಲ್ಲಿ ಕೆಲಸ ಮಾಡುತ್ತಿರುವ ವೇತನದಾರರಿಗೂ ಸಹ ಅಂತಹ ಅವಕಾಶ ಇಲ್ಲ (ಇದು ಹೈಕೋರ್ಟ್‌ ಮತ್ತು ಸರ್ಕಾರದ ವೇತನ ಪಡೆಯುವ ಉದ್ಯೋಗಿಗಳಿಗಳಿಗೂ ಅನ್ವಯ). ವೇತನ ಪಡೆಯುವ ಉದ್ಯೋಗಿಗಳು ತಮ್ಮ ಬಳಿ ಇರುವ ಸಂಪನ್ಮೂಲಗಳನ್ನೆಲ್ಲಾ ಬಳಸಿ, ಅದು ಭವಿಷ್ಯ ನಿಧಿ ಮತ್ತು ಇತರೆ ಉಳಿತಾಯಗಳೇ ಇರಲಿ ಅದನ್ನೆಲ್ಲಾ ಬಳಸಿ ಸಾಲಕ್ಕಾಗಿ ದೊಡ್ಡ ಮೊತ್ತವನ್ನು ಪ್ರತಿ ತಿಂಗಳೂ ಇಎಂಐ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಅವರಿಗೆ ಯಾರೂ ಉಚಿತ ವಸತಿ ನೀಡುವುದಿಲ್ಲ. ಅವರಿಗೆ ಯಾರೂ ಟ್ರಾನ್ಸಿಟ್‌ ಬಾಡಿಗೆ ( ಭೂಮಿ ಅಭಿವೃದ್ಧಿಗಾಗಿ ತೆರವಿಗೆ ಒಳಗಾದವರಿಗೆ ಪರ್ಯಾಯ ಶಾಶ್ವತ ವಸತಿ ನೀಡುವವರೆಗೆ ನೀಡಲಾಗುವ ನಿರ್ಮಾಣ ಸಂಸ್ಥೆ ನೀಡುವ ಬಾಡಿಗೆ) ಅಥವಾ ಆರ್ಥಿಕ ನೆರವು ನೀಡುವುದಿಲ್ಲ” ಎಂದು ನ್ಯಾಯಾಲಯವು ನವೆಂಬರ್‌ 10ರ ಆದೇಶದಲ್ಲಿ ಹೇಳಿದೆ.