Justice A S Dave 
ಸುದ್ದಿಗಳು

ಗೋಧ್ರಾ ರೈಲು ದಹನ ಪ್ರಕರಣದ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್‌ನ ನಿವೃತ್ತ ಹಂಗಾಮಿ ಸಿಜೆ ಎ ಎಸ್ ದವೆ ನಿಧನ

ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ನೇಮಕಕ್ಕೂ ಮುನ್ನ ತಮ್ಮ ನಿವೃತ್ತಿಗೂ ಮೊದಲು ನ್ಯಾ. ಎ ಎಸ್ ದವೆ 2018ರ ನವೆಂಬರ್ 2019ರ ಸೆಪ್ಟೆಂಬರ್ ವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Bar & Bench

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಗಿರುವ ಸಾಬರಮತಿ ಎಕ್ಸ್ ಪ್ರೆಸ್/ಗೋಧ್ರಾ ರೈಲು ದಹನದಂಥ ಪ್ರಕರಣಗಳ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್‌ನ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅನಂತಕುಮಾರ್ ಸುರೇಂದ್ರರೇ ದವೆ ಸೋಮವಾರ ನಿಧನರಾಗಿದ್ದಾರೆ. ನಿವೃತ್ತಿಗೂ ಮುನ್ನ ಹಾಗೂ ಹಾಲಿ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ನ್ಯಾ. ಎ ಎಸ್ ದವೆ ಅವರು ಗುಜರಾತ್ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

1957ರ ಡಿಸೆಂಬರ್‌ನಲ್ಲಿ ಜನಿಸಿದ್ದ ಎ ಎಸ್ ದವೆ ಅವರು 1984ರಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು. ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಾಗಿ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ಮನವಿದಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಗುಜರಾತ್ ಹೈಕೋರ್ಟ್‌ನಲ್ಲಿ ಸಾಲಿಸಿಟರ್ ಆಗಿ, ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ, ಸರ್ದಾರ್ ಸರೋವರ ನಿಗಮ ಲಿ., ಬಿಎಸ್‌ಎನ್‌ಎಲ್, ಜಿಇ ಮಂಡಳಿ, ಜಿಎಸ್‌ಐಸಿ ಮತ್ತು ಗುಜರಾತ್ ಹೈಕೋರ್ಟ್‌ನ ಕಾನೂನು ಸಲಹಾ ಸಮಿತಿಯ ಕಾನೂನು ಸಲಹೆಗಾರರಾಗಿ ಅವರು ಕರ್ತವ್ಯ ನಿರ್ವಹಿಸಿದ್ದರು.

2004ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ದವೆ ಅವರು 2006ರಲ್ಲಿ ಕಾಯಂಗೊಂಡಿದ್ದರು. ಸಾಬರಮತಿ ಎಕ್ಸ್ ಪ್ರೆಸ್/ಗೋಧ್ರಾ ರೈಲು ದುರಂತ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ 11 ಮಂದಿಗೆ ವಿಧಿಸಲಾಗಿದ್ದ ಆಜೀವ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಮಾರ್ಪಡಿಸಿದ್ದ ನ್ಯಾ. ದವೆ ನೇತೃತ್ವದ ಪೀಠವು ಉಳಿದ 20 ಮಂದಿಗೆ ವಿಧಿಸಲಾಗಿದ್ದ ಆಜೀವ ಶಿಕ್ಷೆಯನ್ನು ಎತ್ತಿಹಿಡಿದಿತ್ತು.

ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ನೇಮಕಕ್ಕೂ ಮುನ್ನ ನಿವೃತ್ತಿಗೂ ಮೊದಲು ನ್ಯಾ. ಎ ಎಸ್ ದವೆ ಅವರು 2018ರ ನವೆಂಬರ್ 2019ರ ಸೆಪ್ಟೆಂಬರ್ ವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.