<div class="paragraphs"><p>Justice G T Nanavati</p></div>

Justice G T Nanavati

 
ಸುದ್ದಿಗಳು

ಸಿಖ್‌, ಗೋಧ್ರಾ ಹತ್ಯಾಕಾಂಡ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಿ ಟಿ ನಾನಾವತಿ ನಿಧನ

Bar & Bench

ಸ್ವತಂತ್ರ ಭಾರತದಲ್ಲಿ ಕಪ್ಪುಚುಕ್ಕೆಯಾಗಿರುವ ಸಿಖ್‌ ಮತ್ತು ಗೋಧ್ರಾ ಹತ್ಯಾಕಾಂಡ ಪ್ರಕರಣಗಳ ತನಿಖೆಯ ನೇತೃತ್ವ ವಹಿಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಿ ಟಿ ನಾನಾವತಿ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

1935ರ ಫೆಬ್ರವರಿ 17ರಲ್ಲಿ ಜನಿಸಿದ್ದ ನ್ಯಾಯಮೂರ್ತಿ ನಾನಾವತಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ 1958ರಲ್ಲಿ ವಕೀಲಿಕೆ ಆರಂಭಿಸಿದ್ದರು. 1979ರಲ್ಲಿ ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಅವರನ್ನು 1993ರಲ್ಲಿ ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.

ಆ ಬಳಿಕ ಅವರು ಒಡಿಶಾ ಮತ್ತು ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 1995ರ ಮಾರ್ಚ್‌ 6ರಂದು ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಗಿತ್ತು. 2000ದ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಪದವಿಯಿಂದ ನಿವೃತ್ತರಾಗಿದ್ದರು.

1984ರಲ್ಲಿ ಸಿಖ್‌ ಹತ್ಯಾಕಾಂಡ ತನಿಖಾ ಆಯೋಗದ ನೇತೃತ್ವ ವಹಿಸಿದ್ದ ನಾನಾವತಿ ಅವರು ನಿವೃತ್ತಿಯ ಬಳಿಕ 2002ರಲ್ಲಿ ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ಹತ್ಯಾಕಾಂಡದ ತನಿಖೆಗಾಗಿ ರಚಿಸಲಾಗಿದ್ದ ಆಯೋಗದ ನೇತೃತ್ವ ವಹಿಸಿದ್ದರು.