Supreme Court 
ಸುದ್ದಿಗಳು

ಬಣ್ಣಗುರುಡು ಇರುವ ವಿದ್ಯಾರ್ಥಿಗಳಿಗೂ ಅವಕಾಶ ನೀಡುವಂತೆ ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸುಪ್ರೀಂ ಸೂಚನೆ [ಚುಟುಕು]

Bar & Bench

ತನ್ನ ಪಠ್ಯಕ್ರಮ ಮತ್ತು ಪ್ರವೇಶಾತಿಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಅಭ್ಯರ್ಥಿಗಳು ಮತ್ತು ಬಣ್ಣಗುರುಡು ದೃಷ್ಟಿ ದೋಷವುಳ್ಳವರನ್ನು ಒಳಗೊಂಡು ಎಲ್ಲರಿಗೂ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ (ಎಫ್‌ಟಿಐಐ) ಸುಪ್ರೀಂ ಕೋರ್ಟ್‌ ಸೂಚಿಸಿದೆ.

ವರ್ಣ ಸಂಕಲನದಲ್ಲಿ ಕಡ್ಡಾಯ ಮಾದರಿ ರೂಪಿಸಿರುವುದನ್ನು ಮತ್ತು ಬಣ್ಣಗುರುಡಿನ ಕಾರಣಕ್ಕೆ ಪರೀಕ್ಷೆ ಉತ್ತೀರ್ಣನಾಗದ ತನ್ನನ್ನು ಡಿಬಾರ್‌ ಮಾಡಿರುವುದನ್ನು ಪ್ರಶ್ನಿಸಿ ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರಿದ್ದ ಪೀಠ ಆಲಿಸಿತು. ಸೂಕ್ತ ಅವಕಾಶ ಕೋರಿರುವ ಇಂತಹ ಪ್ರಕರಣಗಳಲ್ಲಿ ಬುದ್ಧಿಗಿಂತಲೂ ಹೃದಯ ಪ್ರಧಾನ ಪಾತ್ರ ವಹಿಸಬೇಕು ಎಂದು ಅದು ಹೇಳಿತು.


ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.