NDPS Act
NDPS Act 
ಸುದ್ದಿಗಳು

ಎನ್‌ಡಿಪಿಎಸ್‌ ಕಾಯಿದೆಯು ಗಾಂಜಾ ಬೀಜ, ಎಲೆ ಹಾಗೂ ಕಾಂಡದ ತೂಕವನ್ನು ಒಳಗೊಳ್ಳುವುದಿಲ್ಲ: ಬಾಂಬೆ ಹೈಕೋರ್ಟ್

Bar & Bench

ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ ಪ್ರಕಾರ ಅಪರಾಧವನ್ನು ನಿರ್ಧರಿಸಲು ಗಾಂಜಾ ತೂಕವನ್ನು ಪರಿಗಣಿಸುವಾಗ ಆ ಸಸ್ಯದ ಬೀಜ, ಎಲೆ ಹಾಗೂ ಕಾಂಡಗಳ ತೂಕವನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಇಬ್ರಾಹಿಂ ಖ್ವಾಜಾ ಮಿಯಾ ಸಯ್ಯದ್ ಅಲಿಯಾಸ್‌ ರಾಜು ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 2(iii)(ಬಿ) ಪ್ರಕಾರ, ಗಾಂಜಾ ಎಂದರೆ ಬೀಜ ಮತ್ತು ಎಲೆಗಳು ಅಲ್ಲದ ಹೂವು ಅಥವಾ ಹಣ್ಣಿನ ಕುಡಿಗಳಾಗಿವೆ ಎಂದು ನ್ಯಾ. ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿತು.

“ಈ ಸೆಕ್ಷನ್‌ನ ಸರಳ ಓದುವಿಕೆಯಿಂದ ಬೀಜ ಮತ್ತು ಎಲೆಗಳನ್ನು ಒಳಗೊಂಡ ಗಾಂಜಾ (ಕ್ಯಾನಬೀಸ್‌) ಸಸ್ಯದಲ್ಲಿ ಹೂವು ಮತ್ತು ಹಣ್ಣಿನ ಕುಡಿಗಳು ಇಲ್ಲದಿದ್ದರೆ ಅದನ್ನು ಗಾಂಜಾ ವ್ಯಾಖ್ಯಾನದಡಿ ತರಲಾಗುವುದಿಲ್ಲ ಎಂದು ತಿಳಿದುಬರುತ್ತದೆ” ಎಂಬುದಾಗಿ ನ್ಯಾಯಾಲಯ ಹೇಳಿದೆ.

ಹೀಗಾಗಿ ಆರೋಪಿಯೊಬ್ಬನಿಂದ ವಶಪಡಿಸಿಕೊಂಡ ಗಾಂಜಾದಲ್ಲಿ ಎಲೆ, ಬೀಜ ಹಾಗೂ ಹೂವಿನ ಭಾಗದ ಬದಲು ಕಾಂಡದ ತೂಕ ಒಳಗೊಂಡಿರಬಹುದು ಎಂದು ನಿರ್ಧರಿಸಿರುವ ಪೀಠ ಆತನಿಗೆ ಜಾಮೀನು ನೀಡಿದೆ.

ಅರ್ಜಿದಾರ ಆರೋಪಿಯು 20 ಕೆಜಿಗೂ ಹೆಚ್ಚು ಗಾಂಜಾವನ್ನು ಹೊಂದಿದ್ದು, ಇದು ಎನ್‌ಡಿಪಿಎಸ್ ಕಾಯಿದೆ ಪ್ರಕಾರ ವಾಣಿಜ್ಯ ಪ್ರಮಾಣದ್ದಾಗಿದೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು. ಆದರೆ ಇದರಲ್ಲಿ ಬೀಜಗಳು, ಎಲೆಗಳು ಹಾಗೂಕಾಂಡಗಳ ತೂಕವೂ ಸೇರಿದ್ದು ಮೂಲತಃ ಹೂವು ಅಥವಾ ಹಣ್ಣಿನ ಕುಡಿಗಳನ್ನು ಒಳಗೊ೦ಡಿರಲಿಲ್ಲ ಎಂದು ಆರೋಪಿ ಪರ ವಾದಿಸಲಾಗಿತ್ತು.