ಸುದ್ದಿಗಳು

ಸರ್ಕಾರಿ ಶಾಲೆಯಾಗಿ ಅನುದಾನಿತ ಮದರಸಾಗಳು: ಅಸ್ಸಾಂ ರಿಪೀಲಿಂಗ್ ಕಾಯಿದೆ ಎತ್ತಿಹಿಡಿದ ಗುವಾಹಟಿ ಹೈಕೋರ್ಟ್ [ಚುಟುಕು]

Bar & Bench

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರದಿಂದ ಅನುದಾನ ಪಡೆದ ಮದರಸಾಗಳನ್ನು ಸಾಮಾನ್ಯ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸುವ ಅಸ್ಸಾಂ ರಿಪೀಲಿಂಗ್‌ ಕಾಯಿದೆಯನ್ನು ಗುವಾಹಟಿ ಹೈಕೋರ್ಟ್‌ ಇತ್ತೀಚೆಗೆ ಎತ್ತಿಹಿಡಿದಿದೆ. ಇಂತಹ ಮದರಸಾಗಳು ಅಲ್ಪಸಂಖ್ಯಾತ ಸಮುದಾಯ ಸ್ಥಾಪಿಸಿದ ಮತ್ತು ನಿರ್ವಹಿಸುತ್ತಿರುವ ಅಲ್ಪಸಂಖ್ಯಾತ ಸಂಸ್ಥೆಗಳು ಎಂಬ ಅರ್ಜಿದಾರ ಇಮಾದ್‌ ಉದ್ದೀನ್‌ ಬರ್ಬುಯಾನ್‌ ಅವರ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ಅವರಿದ್ದ ಪೀಠ ತಿಳಿಸಿದೆ. ಈ ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸರ್ಕಾರಿ ನೌಕರರಾಗಿರುವುದರಿಂದ, ರಾಜ್ಯದ ಮದರಸಾಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳು ಸ್ಥಾಪಿಸುತ್ತವೆ ಅಥವಾ ನಡೆಸುತ್ತವೆ ಎಂದು ಹೇಳಲಾಗದು ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.