ಗೋಧ್ರೋತ್ತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ 35 ಜನರನ್ನು ಖುಲಾಸೆಗೊಳಿಸಿದ್ದ ಗುಜರಾತ್‌ನ ಹಲೋಲ್‌ನಲ್ಲಿರುವ ಸೆಷನ್ಸ್ ನ್ಯಾಯಾಲಯ ʼಸುದೀರ್ಘ ವಿಚಾರಣೆ ನಡೆದದ್ದಕ್ಕೆ ಹುಸಿ ಜಾತ್ಯತೀತ ಮಾಧ್ಯಮಗಳು, ರಾಜಕಾರಣಿಗಳು ಹಾಗೂ ಮುಸ್ಲಿಂ ಸಮುದಾಯದ ಸಾಕ್ಷಿಗಳು ಕಾರಣ ಎಂದು ದೂಷಿಸಿದೆ. [ಗುಜರಾತ್ ಸರ್ಕಾರ ಮತ್ತು ಮಹೇಶ್ ದೀನುಭಾಯ್ ವಲಾಂಡ್ ನಡುವಣ ಪ್ರಕರಣ].
ಈ ವ್ಯಕ್ತಿಗಳನ್ನು ಬಂಧಿಸುವಂತೆ ಹುಸಿ ಜಾತ್ಯತೀತ ಮಾಧ್ಯಮಗಳು ಮತ್ತು ಸಂಘಟನೆಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದವು ಎಂದು ನ್ಯಾಯಾಧೀಶ ಹರ್ಷ್ ತ್ರಿವೇದಿ ಹೇಳಿದ್ದಾರೆ.
ಗುಜರಾತ್‌ನಲ್ಲಿ ನಡೆದಿದ್ದು ಸ್ವಯಂ ಪ್ರೇರಿತ ಗಲಭೆಗಳೇ ವಿನಾ ಹುಸಿ ಜಾತ್ಯತೀತರು ಹೇಳಿದಂತೆ ಅವು ಯೋಜಿತವಾದುವಾಗಿರಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಗೋಧ್ರಾ ರೈಲು ಹತ್ಯಾಕಾಂಡದ ಒಂದು ದಿನದ ಬಳಿಕ ರೈಲ್ವೇ ಪೊಲೀಸರ ಮೇಲೆ ಹುಸಿ ಜಾತ್ಯತೀತ ರಾಜಕಾರಣಿಗಳು ಮತ್ತು ಮಾಧ್ಯಮಗಳು ಅಪಾರ ಒತ್ತಡ ಹೇರಿದವು.
"ಶಾಂತಿ ಪ್ರಿಯ ಗುಜರಾತಿನ ಜನರು ಈ ಘಟನೆಯಿಂದ ಆಘಾತ ಮತ್ತು ದುಃಖಕ್ಕೆ ಒಳಗಾಗಿದ್ದಾರೆ. ಆಗ ನೋವುಂಡ ಜನರ ಗಾಯಕ್ಕೆ ಹುಸಿ ಜಾತ್ಯತೀತ ಮಾಧ್ಯಮಗಳು ಮತ್ತು ರಾಜಕಾರಣಿಗಳು ಉಪ್ಪು ಸವರಿದ್ದನ್ನು ಕಂಡಿದ್ದೇವೆ. ಗೋಧ್ರೋತ್ತರ ಗಲಭೆ ಬಳಿಕ ಗುಜರಾತ್‌ನ 24 ಜಿಲ್ಲೆಗಳಲ್ಲಿ 16 ಕೋಮು ಗಲಭೆಗೆ ತುತ್ತಾದವು ಎಂದು ವರದಿ ಹೇಳುತ್ತದೆ," ಎಂಬುದಾಗಿ ನ್ಯಾಯಾಧೀಶರು ವಿವರಿಸಿದ್ದಾರೆ.
ಅನಗತ್ಯವಾಗಿ ಪೊಲೀಸರು ಆರೋಪಿಗಳನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
"ಪೊಲೀಸರು ಈ ಪ್ರದೇಶದ ಪ್ರಮುಖ ಹಿಂದೂ ವ್ಯಕ್ತಿಗಳಾದ ವೈದ್ಯರು, ಪ್ರಾಧ್ಯಾಪಕರು, ಶಿಕ್ಷಕರು, ಉದ್ಯಮಿಗಳು, ಪಂಚಾಯತ್ ಅಧಿಕಾರಿಗಳು ಮುಂತಾದವರನ್ನು ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಆರೋಪಿಸಿದ್ದಾರೆ. ಹುಸಿ ಜಾತ್ಯತೀತ ಮಾಧ್ಯಮ ಮತ್ತು ಸಂಘಟನೆಗಳ ಗಲಾಟೆಯಿಂದಾಗಿ, ಆರೋಪಿಗಳು ಸುದೀರ್ಘ ವಿಚಾರಣೆ ಎದುರಿಸಬೇಕಾಯಿತು" ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.
ಗೋಧ್ರಾ ಜಿಲ್ಲೆಯ ಹಲೋಲ್ ಪ್ರದೇಶದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾವಿರಾರು 'ಮತಾಂಧ' ಹಿಂದೂ ಗುಂಪುಗಳು ಈ ಪ್ರದೇಶದಲ್ಲಿ ಮುಸ್ಲಿಮರ ಮನೆಗಳು, ಅಂಗಡಿಗಳು ಹಾಗೂ ಆಸ್ತಿಪಾಸ್ತಿ ಮೇಲೆ ದಾಳಿ ಮಾಡಿ ಹಾನಿಗೊಳಿಸಿದವು ಎಂದು ಆರೋಪಿಸಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಭಾರತದಲ್ಲಿ ಕೋಮುಗಲಭೆ ಹೊಸ ವಿದ್ಯಮಾನವಲ್ಲ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
"ಭಾರತದಲ್ಲಿಕೋಮುಗಲಭೆಗಳುದೀರ್ಘಕಾಲದಿಂದ ನಡೆಯತ್ತ ಬಂದಿವೆ. ಸಾಮಾನ್ಯವಾಗಿಕ್ಷುಲ್ಲಕವಿವಾದಮತ್ತುಅಸಹಿಷ್ಣುತೆ,ಧಾರ್ಮಿಕರಚನೆಗಳ ಧ್ವಂಸ, ಹಬ್ಬಗಳ ಆಚರಣೆ ವೇಳೆ ಇತರರ ಮಧ್ಯಪ್ರವೇಶ, ಪ್ರಾರ್ಥನೆ ಸಮಯದ ಸಂಘರ್ಷ, ಪೂಜಾಸ್ಥಳಗಳವಿವಾದ, ಅಂತರ್ ಧರ್ಮೀಯ ವಿವಾಹ, ಪವಿತ್ರಸ್ಥಳಗಳಅಪವಿತ್ರತೆ, ಲೈಂಗಿಕ ಕೃತ್ಯಗಳು ನಡೆದಾಗ ಜೊತೆಗೆ ಅತಿಕ್ರಮಣ ನಡೆದಿದೆ ಎಂಬ ಗಾಳಿಸುದ್ದಿ ಅಥವಾ ಭಾರತ ವಿರೋಧಿಗಳ ಉಪಸ್ಥಿತಿಯಿಂದಾಗಿ ಉಂಟಾಗುತ್ತಿವೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.