Hathras Case 
ಸುದ್ದಿಗಳು

[ಬ್ರೇಕಿಂಗ್] ಹಾಥ್‌ರಸ್‌ ಪ್ರಕರಣದ ಎಲ್ಲಾ ವಿಚಾರಗಳನ್ನು ಅಲಾಹಾಬಾದ್‌ ಹೈಕೋರ್ಟ್‌ ಪರಿಗಣಿಸಲಿದೆ: ಸುಪ್ರೀಂ ಕೋರ್ಟ್

ಸಂತ್ರಸ್ತ ಯುವತಿಯ ಅಂತ್ಯಸಂಸ್ಕಾರವನ್ನು ಬಲವಂತವಾಗಿ ನಡೆಸಿದ್ದ ಅಧಿಕಾರಿ ವಲಯದ ನಿಲುವನ್ನು ಪ್ರಶ್ನಿಸಿ, ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದ ಮನವಿಗಳ ವಿಚಾರಣೆಯ ನಂತರ ನ್ಯಾಯಾಲಯ ಆದೇಶ ಹೊರಡಿಸಿದೆ.

Bar & Bench

ಹಾಥ್‌ರಸ್‌ ಹೇಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಅಲಾಹಾಬಾದ್‌ ಹೈಕೋರ್ಟ್‌ ಪರಿಗಣಿಸಲಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಪ್ರಕರಣದ ಅರ್ಹತಾ ವಿಷಯಗಳ ಬಗ್ಗೆ ತನ್ನ ಆದೇಶದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿತು.

ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸೂರ್ಯೋದಯಕ್ಕೂ ಮುನ್ನವೇ ಕುಟುಂಬಸ್ಥರ ಅನುಮತಿಯನ್ನೂ ಪಡೆಯದೇ, ಅವರನ್ನು ದೂರವರಿಸಿ ಸಂತ್ರಸ್ತ ಯುವತಿಯ ಅಂತ್ಯ ಸಂಸ್ಕಾರ ನಡೆಸಿದ್ದ ಬಗ್ಗೆ ದೇಶಾದ್ಯಾಂತ ವ್ಯಾಪಕ ಟೀಕೆಗೆ ಉತ್ತರ ಪ್ರದೇಶದ ಅಧಿಕಾರಿ ವಲಯ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆಗೆ ಆಗ್ರಹಿಸಿ ಹಾಗೂ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸಂತ್ರಸ್ತ ಯುವತಿಯ ಕುಟುಂಬಸ್ಥರಿಗೆ ಹಾಗೂ ಸಾಕ್ಷಿಗಳ ರಕ್ಷಣೆಗೆ ಭದ್ರತೆಯನ್ನು ಒದಗಿಸುವಂತೆಯೂ ಕೋರಲಾಗಿತ್ತು.