CJI DY Chandrachud  
ಸುದ್ದಿಗಳು

ನಾನೀಗ ಸಸ್ಯಾಹಾರಿ; ರೇಷ್ಮೆ, ಚರ್ಮದ ಉತ್ಪನ್ನ ಬಳಸುವುದಿಲ್ಲ: ಸಿಜೆಐ ಡಿ ವೈ ಚಂದ್ರಚೂಡ್

ದೆಹಲಿ ಹೈಕೋರ್ಟ್‌ನ ಡಿಜಿಟಲ್ ಕಾನೂನು ವರದಿಗಳ ಬಿಡುಗಡೆ ಹಾಗೂ ಹೈಕೋರ್ಟ್ ಅಂಗಳದಲ್ಲಿರುವ ಸಾಗರ್ ರತ್ನ ರೆಸ್ಟರಂಟ್ ಔಟ್‌ಲೆಟ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Bar & Bench

ಕ್ರೌರ್ಯ ಮುಕ್ತ ಜೀವನ ನಡೆಸಲು ತನ್ನ ಮಗಳು ಪ್ರೇರೇಪಣೆ ನೀಡಿದ್ದು ಆ ಬಳಿಕ ನಾನು ಸಸ್ಯಾಹಾರಿಯಾಗಿದ್ದೇನೆ. ಹೀಗಾಗಿ ತಾನು ರೇಷ್ಮೆ, ಚರ್ಮದ ಉತ್ಪನ್ನ ಬಳಸುವುದಿಲ್ಲ, ಸಸ್ಯಾಹಾರಿ ಮತ್ತು ಸಸ್ಯಜನ್ಯ ಉತ್ಪನ್ನಗಳನ್ನು (ವೀಗನ್‌) ಮಾತ್ರವೇ ಬಳಸುತ್ತಿರುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.  

ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ದೆಹಲಿ ಹೈಕೋರ್ಟ್‌ ಡಿಜಿಟಲ್ ಕಾನೂನು ವರದಿಗಳ ಬಿಡುಗಡೆ ಕಾರ್ಯಕ್ರಮ ಹಾಗೂ ಉಚ್ಚ ನ್ಯಾಯಾಲಯದ ಅಂಗಳದಲ್ಲಿರುವ ಸಾಗರ್ ರತ್ನ ರೆಸ್ಟರಂಟ್ ಔಟ್‌ಲೆಟ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಔಟ್‌ಲೆಟ್‌ ನರ ಸಂಬಂಧಿ  ಸಮಸ್ಯೆಗಳಿಂದ ಬಳಲುತ್ತಿರುವವರಿಂದ ನಡೆಯುತ್ತಿದೆ.

"ನನಗೆ ವಿಶೇಷ ಚೇತನರಾದ ಇಬ್ಬರು ಹೆಣ್ಣು ಮಕ್ಕಳಿದ್ದು ನನ್ನ ಕೆಲಸಗಳಿಗೆಲ್ಲಾ ಸ್ಫೂರ್ತಿದಾಯಿನಿಯರಾಗಿದ್ದಾರೆ. ನನ್ನ ಮಗಳು ಕ್ರೌರ್ಯ ಮುಕ್ತ ಜೀವನ ನಡೆಸಬೇಕು ಎಂದು ಹೇಳಿರುವುದರಿಂದ ನಾನೀಗ ಸಸ್ಯಾಹಾರಿಯಾಗಿದ್ದೇನೆ. ನಾನು ರೇಷ್ಮೆ ಇಲ್ಲವೇ ಚರ್ಮದ ಉತ್ಪನ್ನ ಖರೀದಿಸುವುದಿಲ್ಲ. ನನ್ನ ಪತ್ನಿಯೂ ಯಾವುದೇ ರೇಷ್ಮೆ ಅಥವಾ ಚರ್ಮದ ಉತ್ಪನ್ನಗಳನ್ನು ಖರೀದಿಸುವುದಿಲ್ಲ," ಎಂದು ಅವರು ಹೇಳಿದರು.

ವಿಕಲಚೇತನರೊಂದಿಗಿನ ತಮ್ಮ ಅನುಭವಗಳ ಬಗ್ಗೆಯೂ ಅವರು ಇದೇ ವೇಳೆ ಮಾತನಾಡಿದರು.

ಪ್ರತಿದಿನ ವಿಕಲಚೇತನರೊಂದಿಗೆ ಮಾತನಾಡಿ ಅವರಲ್ಲಿರುವ ಅಗಾಧ ಸಾಮರ್ಥ್ಯವನ್ನು ಅರಿಯುತ್ತೇನೆ. ಇದು (ನರ ಸಂಬಂಧಿ ಸಮಸ್ಯೆಗಳಿರುವ ವ್ಯಕ್ತಿಗಳಿಂದ ನಡೆಯುತ್ತಿರುವ ಸಾಗರ ರತ್ನ ರೆಸ್ಟರಂಟ್‌ ಔಟ್‌ಲೆಟ್‌) ಇನ್ನು ಮುಂದೆ ಕೇವಲ ಉದ್ಯಮವಾಗಿರದೆ ಚಳವಳಿಯಾಗಿ ಮಾರ್ಪಟ್ಟಿದೆ.

"ಪ್ರತಿದಿನ ನಾನು ವಿಕಲಚೇತನರ ಸಂಪರ್ಕಕ್ಕೆ ಬರುತ್ತೇನೆ, ಅವರಲ್ಲಿರುವ ಅಗಾಧ ಸಾಮರ್ಥ್ಯವನ್ನು ನಾನು ಅರಿತುಕೊಳ್ಳುತ್ತೇನೆ. ಇದು (ನರ-ವೈವಿಧ್ಯಮಯ ವ್ಯಕ್ತಿಗಳಿಂದ ನಡೆಸಲ್ಪಡುವ ಸಾಗರ ರತ್ನ ಔಟ್ಲೆಟ್) ಯಾವುದೋ ಮತ್ತೊಂದು ಉದ್ಯಮವಲ್ಲ. ಬದಲಿಗೆ ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ. (ಸಂಪೂರ್ಣ ವಿಕಲಚೇತನರಿಂದಲೇ ನಡೆಯುವ) ಮಿಟ್ಟಿ ಕೆಫೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ (ನವೆಂಬರ್‌ 2023ರಲ್ಲಿ) ಸ್ಥಾಪಿಸಿದಾಗ ಅದನ್ನು ವಕೀಲ ವರ್ಗ ಮನಃಪೂರ್ವಕವಾಗಿ ಮೆಚ್ಚಿಕೊಂಡಿತು” ಎಂದು ಅವರು ವಿವರಿಸಿದರು.