ಸುದ್ದಿಗಳು

ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮಡಿದ ಭಾರತೀಯರಿಗೆ ಹೈಕೋರ್ಟ್‌ ಶ್ರದ್ಧಾಂಜಲಿ

ಕಲಾಪದ ನಡುವೆ ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷ ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ನ್ಯಾಯಮೂರ್ತಿಗಳು ಮತ್ತು ವಕೀಲರು ಎದ್ದು ನಿಂತು ಮೌನಾಚರಣೆಯ ಮೂಲಕ ಗೌರವ ಸಲ್ಲಿಸಿದರು.

Bar & Bench

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರಾಣ ತೆತ್ತ ಭಾರತೀಯರ ಗೌರವಾರ್ಥ ಕರ್ನಾಟಕ ಹೈಕೋರ್ಟ್‌ ಸೋಮವಾರ ಎರಡು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.

ಕಲಾಪದ ನಡುವೆ ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷ ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ನ್ಯಾಯಮೂರ್ತಿಗಳು ಮತ್ತು ವಕೀಲರು ಎದ್ದು ನಿಂತು ಮೌನಾಚರಣೆಯ ಮೂಲಕ ಉಗ್ರರ ದಾಳಿಗೆ ತುತ್ತಾದ ಮೃತರಿಗೆ ಗೌರವ ಸಲ್ಲಿಸಿದರು.

ಮೌನಾಚರಣೆ ನಡೆಸುವ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಏಪ್ರಿಲ್‌ 26ರಂದು ಮುಖ್ಯ ನ್ಯಾಯಮೂರ್ತಿ ಸೂಚನೆಯ ಮೇರೆಗೆ ಸುತ್ತೋಲೆ ಹೊರಡಿಸಿದ್ದರು.

ಏಪ್ರಿಲ್‌ 22ರಂದು ಮಧ್ಯಾಹ್ನ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಮೂವರು ಕನ್ನಡಿಗರೂ ಸೇರಿ 28 ಭಾರತೀಯರು ಹತರಾಗಿದ್ದರು. ಬೆಂಗಳೂರು ವಕೀಲರ ಸಂಘವು ಈಚೆಗೆ ದಾಳಿ ಖಂಡಿಸಿ, ಪ್ರತಿಭಟನೆ ನಡೆಸಿತ್ತು.