Karnataka High Court
Karnataka High Court 
ಸುದ್ದಿಗಳು

ಸಮನ್ಸ್‌, ನೋಟಿಸ್‌, ದಾಖಲೆಗಳನ್ನು ತುರ್ತಾಗಿ ತಲುಪಿಸಲು ಹೈಕೋರ್ಟ್‌ನದಿಂದ ಕರಡು ನಿಯಮ ಅಧಿಸೂಚನೆ ಪ್ರಕಟ

Bar & Bench

ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ತುರ್ತಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ನ್ಯಾಯಾಲಯಗಳು –ಸಮನ್ಸ್‌/ನೋಟಿಸ್‌/ಪ್ರಕ್ರಿಯೆಗಳು/ ದಾಖಲೆಗಳು (ಸಿವಿಲ್‌ ಪ್ರಕ್ರಿಯೆಗಳು) ಕೊರಿಯರ್‌ ನಿಯಮಗಳು 2023 ಎಂಬ ಕರಡು ನಿಯಮ ರೂಪಿಸಿರುವ ಕರ್ನಾಟಕ ಹೈಕೋರ್ಟ್‌ ಸಂಬಂಧಿತರಿಂದ ಆಕ್ಷೇಪಣೆ ಆಹ್ವಾನಿಸಿದೆ. ಈ ನಿಯಮಗಳು ನ್ಯಾಯಾಲಯಗಳು/ನ್ಯಾಯಮಂಡಳಿಗೆ ಅನ್ವಯಿಸಲಿವೆ.

ಕರ್ನಾಟಕ ನ್ಯಾಯಾಲಯಗಳು ಸಮನ್ಸ್‌/ನೋಟಿಸ್‌ಗಳು/ಪ್ರಕ್ರಿಯೆಗಳು/ ದಾಖಲೆಗಳ (ಸಿವಿಲ್‌ ಪ್ರಕ್ರಿಯೆಗಳು) ಎಲೆಕ್ಟ್ರಾನಿಕ್‌ ಮೇಲ್‌ ನಿಯಮಗಳು 2023ರ ಕರಡು ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್‌ ಆಗಸ್ಟ್‌ 21ರಂದು ಪ್ರಕಟಿಸಿದೆ. ಭಾದಿತರು ಯಾರೂದೂ ಇದ್ದರೆ ಅವರಿಗೆ ಈ ಮೂಲಕ ಮಾಹಿತಿ ನೀಡಲಾಗುತ್ತಿದೆ. 15 ದಿನಗಳ ಬಳಿಕ ಈ ಕರಡು ನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಸಮನ್ಸ್‌/ ನೋಟಿಸ್‌/ಪ್ರಕ್ರಿಯೆ/ದಾಖಲೆಗಳನ್ನು ಸಲ್ಲಿಸುವುದು ನ್ಯಾಯದಾನ ಮಾಡುವುದರಲ್ಲಿ ವಿಳಂಬ ಉಂಟು ಮಾಡುತ್ತಿವೆ. ಇದಕ್ಕಾಗಿ ತಂತ್ರಜ್ಞಾನ ಬಳಕೆ ಅಗತ್ಯವಾಗಿದ್ದು, ಅದರ ಭಾಗವಾಗಿ ನಿಯಮ ರೂಪಿಸಲಾಗಿದೆ. ಇದರಿಂದ ಸಮನ್ಸ್‌/ ನೋಟಿಸ್‌/ಪ್ರಕ್ರಿಯೆ/ದಾಖಲೆಗಳನ್ನು ಆಧುನಿಕ ಸಂವಹನ ವಿಧಾನಗಳ ಮೂಲಕ ತಲುಪಿಸುವುದು ಸುಲಭವಾಗಲಿದೆ. ನ್ಯಾಯಾಲಯಗಳು/ ನ್ಯಾಯ ಮಂಡಳಿಗಳಿಗೆ ಈ ನಿಯಮ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನೂ, ನಾಗರಿಕ ಪ್ರಕ್ರಿಯಾ ಸಂಹಿತೆ 1908ರ ಷೆಡ್ಯೂಲ್‌ –Iಕ್ಕೆ ತಿದ್ದುಪಡಿ ಮಾಡಿ ನಾಗರಿಕಾ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) (ಕರ್ನಾಟಕ) ನಿಯಮಗಳು 2023 ಕರಡು ಸಿದ್ದಪಡಿಸಿದ್ದು, ಅದರ ಅಧಿಸೂಚನೆಯನ್ನು ಸಹ ಪ್ರಕಟಿಸಲಾಗಿದೆ. ಏನಾದರೂ ಆಕ್ಷೇಪಣೆಗಳು ಇದ್ದರೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

draft-courier-rules-2023.pdf
Preview
draft-email-rules-2023.pdf
Preview
draft-cpc-rules-2023.pdf
Preview