Karnataka High Court 
ಸುದ್ದಿಗಳು

ಕೆಎಟಿ ಏಕಸದಸ್ಯ ಪೀಠದ ಮುಂದಿನ ಕೆಲವು ಆಯ್ದ ಪ್ರಕರಣಗಳನ್ನು ಪೂರ್ಣ ಪೀಠಕ್ಕೆ ವರ್ಗಾಯಿಸಿದ ಆದೇಶಕ್ಕೆ ಹೈಕೋರ್ಟ್‌ ತಡೆ

ಮೇಲ್ಮನವಿ ನ್ಯಾಯ ಮಂಡಳಿಯ ಏಕಸದಸ್ಯ ಪೀಠದ ಮುಂದಿನ ಕೆಲವು ಪ್ರಕರಣಗಳನ್ನು ಪೂರ್ಣ ಪೀಠಕ್ಕೆ ವರ್ಗಾಯಿಸಿ ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿ ಅಧ್ಯಕ್ಷರು 2026ರ ಜುಲೈ 23ರಂದು ಆದೇಶ ಹೊರಡಿಸಿದ್ದರು.

Bar & Bench

ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿಯ (ಕೆಎಟಿ)ದ ಏಕಸದಸ್ಯ ಪೀಠದ ಮುಂದಿನ ಕೆಲವು ಆಯ್ದ ಪ್ರಕರಣಗಳನ್ನು ಪೂರ್ಣ ಪೀಠಕ್ಕೆ ವರ್ಗಾಯಿಸಿದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಮೇಲ್ಮನವಿ ನ್ಯಾಯ ಮಂಡಳಿಯ ಏಕಸದಸ್ಯ ಪೀಠದ ಮುಂದಿನ ಕೆಲವು ಪ್ರಕರಣಗಳನ್ನು ಪೂರ್ಣ ಪೀಠಕ್ಕೆ ವರ್ಗಾಯಿಸಿ ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿ ಅಧ್ಯಕ್ಷರು 2026ರ ಜುಲೈ 23ರಂದು ಆದೇಶ ಹೊರಡಿಸಿದ್ದರು.

ಈ ಆದೇಶ ಸಹಕಾರ ಪ್ರಕರಣಗಳಲ್ಲಿ ಪ್ರಾಧಿಕಾರದ ಮುಂದೆ ಹಾಜರಾಗುವ ನಾಲ್ವರು ವಕೀಲರಾದ ಟಿ ಎಂ ಚೌಡಾರೆಡ್ಡಿ, ಟಿ ದಾದಾಖಲಂದರ್, ರಕ್ಷಿತ್ ಕುಮಾರ್, ಟಿ ಬಿ ಸಂದೇಶ್, ವರುಣ್ ಜೆ. ಪಾಟೀಲ್ ಹಾಗೂ ಎರಡು ಸಹಕಾರ ಸಂಘಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ಏಕಸದಸ್ಯ ಪೀಠದ ಮುಂದಿರುವ ಕೆಲವು ಆಯ್ದ ಪ್ರಕರಣಗಳ ವಿಚಾರಣೆಗೆ ಪೂರ್ಣಪೀಠ ರಚಿಸಿ, ಆ ಪ್ರಕರಣಗಳನ್ನು ಪೂರ್ಣಪೀಠಕ್ಕೆ ವರ್ಗಾಯಿಸಿ ನ್ಯಾಯ ಮಂಡಳಿ ಅಧ್ಯಕ್ಷರರು ಹೊರಡಿಸಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಿತು. ಅಲ್ಲದೇ, ರಾಜ್ಯ ಸರ್ಕಾರದ ಕಾನೂನು ಇಲಾಖೆ, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿತು.