Justice Surya Kant  
ಸುದ್ದಿಗಳು

ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಂತೆ ಹೈಕೋರ್ಟ್‌ಗಳು ಸನ್ನದ್ಧವಾಗಿರಬೇಕು: ನ್ಯಾ. ಸೂರ್ಯ ಕಾಂತ್

ರಾಂಚಿಯಲ್ಲಿ ಶನಿವಾರ ನಡೆದ ಜಾರ್ಖಂಡ್ ಹೈಕೋರ್ಟ್ ರಜತ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Bar & Bench

ಸೈಬರ್ ಅಪರಾಧ, ಡಿಜಿಟಲ್ ಪುರಾವೆ ಮತ್ತು ಸಂಕೀರ್ಣ ಪರಿಸರ ವ್ಯಾಜ್ಯಗಳಂತಹ ವೇಗವಾಗಿ ಬೆಳೆಯುತ್ತಿರುವ ಸವಾಲುಗಳನ್ನು ಎದುರಿಸಲು ಭಾರತದ ಹೈಕೋರ್ಟ್‌ಗಳು ಆಧುನಿಕ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಂತೆ ಸನ್ನದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

ರಾಂಚಿಯಲ್ಲಿ ಶನಿವಾರ ನಡೆದ ಜಾರ್ಖಂಡ್ ಹೈಕೋರ್ಟ್ ರಜತ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ವಿಚಾರಣೆ ಹೊಸ ರೀತಿಯ ಅಪರಾಧ ಮತ್ತು ವ್ಯಾಜ್ಯದ ಓಘ, ಪ್ರಮಾಣ ಮತ್ತು ಸಂಕೀರ್ಣತೆ ನಿರ್ವಹಿಸಲು ಸಾಲದಂತಹ ಕಾಲಕ್ಕೆ ನ್ಯಾಯವ್ಯವಸ್ಥೆ ಸರಿಯುತ್ತಿದ್ದು ತುರ್ತು ವಾರ್ಡ್‌ಗಳಲ್ಲಿ ಇರುವಂತೆ ತ್ವರಿತ, ನಿಖರ, ಸಂಯೋಜಿತ ರೀತಿಯಲ್ಲಿ ಹೈಕೋರ್ಟ್‌ಗಳು ಸ್ಪಂದಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾ. ಕಾಂತ್‌ ಅವರ ಭಾಷಣದ ಪ್ರಮುಖಾಂಶಗಳು

  • ಮುಂದಿನ ದಿನಗಳಲ್ಲಿ ನ್ಯಾಯಾಲಯಗಳು ಸೈಬರ್ ಅಪರಾಧ, ಡಿಜಿಟಲ್ ಪುರಾವೆ, ಪರಿಸರ ವಿವಾದ, ಸಂಪನ್ಮೂಲ ಸಂಘರ್ಷ ಮುಂತಾದ ಸಂಕೀರ್ಣ ಪ್ರಕರಣಗಳನ್ನು ಎದುರಿಸುತ್ತವೆ.

  • ಹೆಚ್ಚುತ್ತಿರುವ ಪ್ರಕರಣಗಳ ಹೊರೆ, ಕಾನೂನು ಪ್ರಾತಿನಿಧ್ಯಕ್ಕೆ ಅಸಮಾನ ಪ್ರವೇಶ ಮತ್ತು ವಿಚಾರಣೆ ವಿಳಂಬಗಳ ನಿರಂತರ ಸವಾಲುಗಳು ನ್ಯಾಯ ವ್ಯವಸ್ಥೆಯನ್ನು ಒತ್ತಡಕ್ಕೆ ಒಳಪಡಿಸುತ್ತಲೇ ಇವೆ.

  • ಇಂತಹ ಸವಾಲುಗಳನ್ನು ನಿಭಾಯಿಸಲು ತಂತ್ರಜ್ಞಾನ ಸಾಮರ್ಥ್ಯ ಹೆಚ್ಚಳ, ವಿಚಾರಣೆಗಳ ಸರಳೀಕರಣ ಹಾಗೂ ವಿಶೇಷ ತರಬೇತಿ ಅನಿವಾರ್ಯ.

  • ತುರ್ತು ವೈದ್ಯಕೀಯ ಘಟಕಗಳಂತೆ, ಭವಿಷ್ಯದಲ್ಲಿ ನ್ಯಾಯಾಲಯಗಳು ಉದಯೋನ್ಮುಖ ಸನ್ನಿವೇಶಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿರಬೇಕು.

  •  ಹೈಕೋರ್ಟ್‌ಗಳು ಜನರ ಬದುಕಿಗೆ ಬಹಳ ಹತ್ತಿರ ಇರುವುದರಿಂದ ಸಾಂವಿಧಾನಿಕ ವ್ಯವಸ್ಥೆಯಲ್ಲಿಅವುಗಳ ಪಾತ್ರ  ಮಹತ್ವದ್ದು.

  • ಸಾಕ್ಷ್ಯಗಳು, ತಂತ್ರಜ್ಞಾನ ಮತ್ತು ಬಿಕ್ಕಟ್ಟುಗಳನ್ನು ನ್ಯಾಯಾಲಯಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ಮುಂಬರುವ ದಶಕಗಳು ಮರು ವ್ಯಾಖ್ಯಾನಿಸಲಿದ್ದು ಸಾಂಸ್ಥಿಕ ಸನ್ನದ್ಧತೆಯನ್ನು ಸಾಂವಿಧಾನಿಕ ಜವಾಬ್ದಾರಿಯಾಗಿ ಪರಿಗಣಿಸಬೇಕು.