Muslim Women

 
ಸುದ್ದಿಗಳು

ಜಾತ್ಯತೀತತೆ ಮೇಲೆ ಪರಿಣಾಮ: ಹಿಜಾಬ್ ಎಸ್‌ಪಿಸಿ ಸಮವಸ್ತ್ರದ ಭಾಗವಾಗಲು ಸಾಧ್ಯವಿಲ್ಲ ಎಂದು ಆದೇಶಿಸಿದ ಕೇರಳ ಸರ್ಕಾರ

ಎಸ್ಪಿಸಿ ಸ್ವಯಂಪ್ರೇರಿತ ಸಹಪಠ್ಯ ಚಟುವಟಿಕೆಯಾಗಿದ್ದು ಕಡ್ಡಾಯ ಶಿಕ್ಷಣ ಕಾರ್ಯಕ್ರಮವಲ್ಲ. ವಿದ್ಯಾರ್ಥಿಗಳಿಗೆ ಲಿಂಗ ನ್ಯಾಯ ಒದಗಿಸುವ ಮತ್ತು ಧಾರ್ಮಿಕೇತರ ತಾರತಮ್ಯ ಹೋಗಲಾಡಿಸುವಂತಹ ವಸ್ತ್ರಸಂಹಿತೆ ಇದಕ್ಕಿದೆ ಎಂದು ಸರ್ಕಾರ ಹೇಳಿದೆ.

Bar & Bench

ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‌ಪಿಸಿ) ಯೋಜನೆಯ ಸಮವಸ್ತ್ರದ ಭಾಗವಾಗಿ ಹಿಜಾಬ್‌ ಅಥವಾ ಧಾರ್ಮಿಕ ಗುರುತುಗಳನ್ನು ಎತ್ತಿ ತೋರಿಸುವಂತಹವನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.

ಎಸ್‌ಪಿಸಿ ಸ್ವಯಂಪ್ರೇರಿತ ಸಹಪಠ್ಯ ಚಟುವಟಿಕೆಯಾಗಿದ್ದು ಕಡ್ಡಾಯ ಶಿಕ್ಷಣ ಕಾರ್ಯಕ್ರಮವಲ್ಲ. ವಿದ್ಯಾರ್ಥಿಗಳು ಲಿಂಗ ನ್ಯಾಯ ಒದಗಿಸುವ ಮತ್ತು ಧಾರ್ಮಿಕೇತರ ತಾರತಮ್ಯ ಹೋಗಲಾಡಿಸುವಂತಹ ವಸ್ತ್ರಸಂಹಿತೆಯನ್ನು ಇದಕ್ಕಿದೆ. ಆದ್ದರಿಂದ ಸಮವಸ್ತ್ರಗಳೊಂದಿಗೆ ಧಾರ್ಮಿಕ ವಿಚಾರಗಳನ್ನು ತಳಕು ಹಾಕುವುದು ಇಂತಹ ಪಡೆಗಳ ಶಿಸ್ತು ಮತ್ತು ಜಾತ್ಯತೀತ ಅಸ್ತಿತ್ವವನ್ನು ಅದು ಪ್ರಶ್ನಿಸುತ್ತದೆ. ಈ ಬೇಡಿಕೆಯನ್ನು ಒಪ್ಪಿದರೆ ಇಂತಹ ಅನೇಕ ಬೇಡಿಕೆಗಳನ್ನು ಮಂಡಿಸಲಾಗುತ್ತದೆ. ಇದು ರಾಜ್ಯದ ಜಾತ್ಯತೀತತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಹೇಳಿದೆ.

ಎಸ್‌ಪಿಸಿ ಸಮವಸ್ತ್ರದಲ್ಲಿ ತನ್ನ ಧರ್ಮಕ್ಕೆ ಅನುಗುಣವಾಗಿ ಪೂರ್ಣ ತೋಳಿನ ಉಡುಗೆ ಮತ್ತು ತಲೆಯನ್ನು ಮುಚ್ಚುವಂತಹ ಸ್ಕಾರ್ಫ್ ಧರಿಸಲು 8ನೇ ತರಗತಿಯ ವಿದ್ಯಾರ್ಥಿನಿ ರಿಜಾ ನಹಾನ್ ಹೈಕೋರ್ಟ್‌ ಅನುಮತಿ ಕೋರಿದ್ದರು.

ಆದರೆ ʼಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾನೂನು, ಶಿಸ್ತು, ನಾಗರಿಕ ಪ್ರಜ್ಞೆ ರೂಪಿಸಲು, ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಹಾನುಭೂತಿ ಮೂಡಿಸಲು ಹಾಗೂ ಸಾಮಾಜಿಕ ಅನಿಷ್ಟಗಳಿಗೆ ಪ್ರತಿರೋಧ ಬೆಳೆಸುವ ಮೂಲಕ ಪ್ರಜಾಸತ್ತಾತ್ಮಕ ಸಮಾಜದ ಭವಿಷ್ಯದ ನಾಯಕರಾಗಿ ವಿಕಸನಗೊಳ್ಳಲು ತರಬೇತಿ ನೀಡುವ ಸಲುವಾಗಿ ಎಸ್‌ಪಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆʼ ಎಂದು ಸರ್ಕಾರ ತನ್ನ ಆದೇಶದಲ್ಲಿ ವಿವರಿಸಿದೆ.

ಸರ್ಕಾರ ಉಲ್ಲೇಖಿಸಿರುವ ರಾಜ್ಯ ಪೊಲೀಸ್‌ ಮುಖ್ಯಸ್ಥರ ಪತ್ರದ ಪ್ರಕಾರ ಎಸ್‌ಪಿಸಿ ಕಾರ್ಯಕ್ರಮ ಎಂಬುದು ಎಲ್ಲಾ ಭೇದಭಾವಗಳನ್ನು ಮೀರಿ ರಾಷ್ಟ್ರವನ್ನು ಉನ್ನತ ಸ್ಥಾನದಲ್ಲಿರಿಸುವ ರೀತಿಯ ಪೀಳಿಗೆಯನ್ನು ಸೃಷ್ಟಿಸುವ ಮತ್ತು ಕಾನೂನಿನ ಆಳ್ವಿಕೆಯನ್ನು ಗೌರವಿಸಿ ಅದನ್ನು ಬಲವಾಗಿ ನಂಬುವ ಸಮಾಜವನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದು ಪೋಲಿಸ್ ಮತ್ತು ವಿದ್ಯಾರ್ಥಿಗಳ ನಡುವಿನ ರಚನಾತ್ಮಕ ವೇದಿಕೆಯಾಗಿದ್ದು ಕೇರಳ ಪೋಲೀಸ್‌ಗೆ ಪೂರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ

ದೂರುದಾರರ ಬೇಡಿಕೆ ಪರಿಗಣಿಸುವ ರೀತಿಯಲ್ಲಿ ಇಲ್ಲ. ಇಂತಹ ಬೇಡಿಕೆಯನ್ನು ಮನ್ನಿಸಿದರೆ ಇತರೆ ಪಡೆಗಳಿಗೂ ಇಂತಹ ಬೇಡಿಕೆ ಅನ್ವಯಿಸಬೇಕಾಗುತ್ತದೆ. ಇದು ರಾಜ್ಯದ ಜಾತ್ಯತೀತತೆಯ ಮೇಲೆ ಗಣನೀಯ ಪರಿಣಾಮ ಬೀರಲಿದೆ. ಆದ್ದರಿಂದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯಡಿ ಧಾರ್ಮಿಕ ಗುರುತನ್ನು ಎತ್ತಿಹಿಡಿಯುಂವತಹ ಯಾವುದೇ ಸೂಚನೆ ನೀಡುವುದು ಸೂಕ್ತವಲ್ಲ” ಎಂದು ತಿಳಿಸಿ ವಿದ್ಯಾರ್ಥಿನಿಯ ಮನವಿಯನ್ನು ತಿರಸ್ಕರಿಸಿದೆ.