ದೇಶದಲ್ಲಿ ಸಂವಿಧಾನ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮೂಲ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವ ಚಿತ್ರ ಸರಣಿಗಳನ್ನು ಇಲ್ಲಿ ನೀಡಲಾಗಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಮೂಲ ಸಂವಿಧಾನದಲ್ಲಿ ಅಳವಡಿಸಲಾಗಿರುವ ಈ ಚಿತ್ರಗಳು ಬಿಂಬಿಸುತ್ತವೆ.
ಸಂವಿಧಾನ ರಚನೆಯಾಗಿ ಏಳು ದಶಕಗಳೇ ಸಂದಿದ್ದರೂ ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿರುವ ಮಾತುಗಳು ಇಂದಿಗೂ ದಿಟವಾಗಿದೆ:
ಸಾಂವಿಧಾನಿಕ ನೈತಿಕತೆಯು ಸ್ವಾಭಾವಿಕವಾದ ಭಾವನೆಯಲ್ಲ. ಅದನ್ನು ರೂಢಿಸಿಕೊಳ್ಳಬೇಕು. ನಮ್ಮ ಜನರು ಅದನ್ನು ಇನ್ನೂ ಕಲಿಯಬೇಕಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಡಾ. ಬಿ ಆರ್ ಅಂಬೇಡ್ಕರ್ Handwritten - Constitution of Indiaಇಂದಿನ ವಿಭಜನಕಾರಿಯಾದ ಕಾಲಘಟ್ಟದಲ್ಲಿ ಸಂವಿಧಾನ ನಿರ್ಮಾತೃಗಳು ಹೊಂದಿದ್ದ ಭಾರತದ ಕಲ್ಪನೆಯನ್ನು ನಾವು ನೆನಪಿಸಿಕೊಳ್ಳುವುದು ಉತ್ತಮ. ಮೂಲಕೃತಿಯಲ್ಲಿರುವ ಚಿತ್ರಗಳು ಈ ಕಲ್ಪನೆಯನ್ನು ಕಟ್ಟಿಕೊಡುತ್ತವೆ.
ಭಾರತದ ಸಂಸ್ಕೃತಿ ಮತ್ತು ಇತಿಹಾಸದ ದೃಷ್ಟಾಂತಗಳನ್ನು ಈ ಚಿತ್ರಗಳು ಪರಿಚಯಿಸುತ್ತವೆ.
ಭಾಗ- I: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಮೊಹೆಂಜೊದಾರೊ ಮುದ್ರಿಕೆ).
ಭಾಗ- I I: ಪೌರತ್ವ (ಗುರುಕುಲದ ದೃಶ್ಯ)
Part IIಭಾಗ- I I I: ಮೂಲಭೂತ ಹಕ್ಕುಗಳು (ರಾಮಾಯಣದ ದೃಶ್ಯ: ಲಂಕಾ ವಿಜಯದ ನಂತರ ಸೀತೆಯೊಂದಿಗೆ ರಾಮ)
Part IIIಭಾಗ- IV: ರಾಜ್ಯ ನೀತಿಯ ನಿರ್ದೇಶಕ ತತ್ವಗಳು (ಮಹಾಭಾರತದ ದೃಶ್ಯ: ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಿರುವ ಕೃಷ್ಣ)
Part IVಭಾಗ- V: ಒಕ್ಕೂಟ (ಬುದ್ಧನ ಜೀವನದ ದೃಶ್ಯ)
ಸೂಚನೆ: ಮೂಲ ಸಂವಿಧಾನದ ಭಾಗಶಃ ಹೆಸರುಗಳನ್ನು ಹಲವು ವರ್ಷಗಳಿಂದ ವಿವಿಧ ತಿದ್ದುಪಡಿಗಳ ಮೂಲಕ ಮಾರ್ಪಡಿಸಲಾಗಿದೆ.
ಭಾಗ- VI: ಪ್ರಥಮ ಷೆಡ್ಯೂಲ್ನ ʼಎʼ ಭಾಗ: ರಾಜ್ಯಗಳು (ಮಹಾವೀರನ ಜೀವನದ ದೃಶ್ಯ)
ಭಾಗ- VII: ಪ್ರಥಮ ಷೆಡ್ಯೂಲ್ನ ʼಬಿʼ ಭಾಗ: ರಾಜ್ಯಗಳು (ಭಾರತ ಮತ್ತು ಹೊರ ದೇಶಗಳಲ್ಲಿ ಅಶೋಕ ಚಕ್ರವರ್ತಿ ಬೌದ್ಧ ಧರ್ಮ ಪ್ರಚಾರ ಮಾಡುತ್ತಿರುವ ದೃಶ್ಯ)
Part VIIಮೊದಲನೇ ಶೆಡ್ಯೂಲ್ನ ಭಾಗ ಮೂರು - ರಾಜ್ಯಗಳು (ಗುಪ್ತರ ಕಲೆಯನ್ನು ಬಿಂಬಿಸುವ ಚಿತ್ರ)
Part VIIIಭಾಗ- IX: ಪ್ರಥಮ ಷೆಡ್ಯೂಲ್ನ ʼಡಿʼ ಭಾಗ: ಪ್ರಾಂತ್ಯಗಳು ಮತ್ತು ಇತರೆ ಪ್ರಾಂತ್ಯಗಳು (ವಿಕ್ರಮಾದಿತ್ಯನ ಆಸ್ಥಾನದ ದೃಶ್ಯ)
ಭಾಗ- X: ಷೆಡ್ಯೂಲ್ಡ್ ಮತ್ತು ಬುಡಕಟ್ಟು ಪ್ರದೇಶ (ನಳಂದಾ ವಿಶ್ವವಿದ್ಯಾಲಯ ಬಿಂಬಿಸುವ ದೃಶ್ಯ)
Part Xಭಾಗ- XI: ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಸಂಬಂಧ (ಒರಿಸ್ಸಾ ಶಿಲ್ಪಗಳ ದೃಶ್ಯ)
ಭಾಗ- XII: ಹಣಕಾಸು, ಆಸ್ತಿ, ಕರಾರುಗಳು ಮತ್ತು ದಾವೆಗಳು (ನಟರಾಜ ಮೂರ್ತಿಯ ಚಿತ್ರ)
ಭಾಗ- XIII: ವ್ಯಾಪಾರ, ವಾಣಿಜ್ಯ ಮತ್ತು ದೇಶದೊಳಗೆ ವಾಣಿಜ್ಯ ವಿನಿಮಯ (ಮಹಾಬಲಿಪುರಂ ಶಿಲ್ಪಗಳ ದೃಶ್ಯ: ಭಗೀರಥನ ತಪಸ್ಸು ಮತ್ತು ಗಂಗೆಯ ಅವರೋಹಣ)
ಭಾಗ-XIV: ಒಕ್ಕೂಟ ಮತ್ತು ರಾಜ್ಯಗಳಲ್ಲಿನ ಸೇವೆಗಳು (ಮೊಘಲ್ ವಾಸ್ತುಶಿಲ್ಪದಲ್ಲಿರುವ ಅಕ್ಬರ್ ದರ್ಬಾರಿನ ಚಿತ್ರ)
ಭಾಗ-XV: ಚುನಾವಣೆಗಳು (ಶಿವಾಜಿ ಮತ್ತು ಗುರು ಗೋವಿಂದ ಸಿಂಗ್ ಚಿತ್ರ)
Part XVಭಾಗ-XVI: ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳು (ಟಿಪ್ಪು ಸುಲ್ತಾನ್ ಮತ್ತು ಲಕ್ಷ್ಮಿ ಬಾಯಿ ಚಿತ್ರಗಳು)
ಭಾಗ-XVII: ಅಧಿಕೃತ ಭಾಷೆ (ರಾಷ್ಟ್ರಪಿತ: ಗಾಂಧೀಜಿ ಅವರು ಭಾಗವಹಿಸಿದ್ದ ದಂಡಿ ಸತ್ಯಾಗ್ರಹದ ದೃಶ್ಯ)
ಭಾಗ-XVIII: ತುರ್ತು ನಿಬಂಧನೆಗಳು (ಶಾಂತಿಧೂತ ಬಾಪೂಜಿ: ನೌಖಾಲಿಯಲ್ಲಿ ಗಲಭೆ ನಡೆದಿದ್ದ ಪ್ರದೇಶದಲ್ಲಿ ಗಾಂಧೀಜಿ ಅವರ ಪ್ರವಾಸ)
ಭಾಗ-XIX: ಹಲವು ಮಿಶ್ರ ವಿಷಯಗಳು (ಹೊರದೇಶದಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತಿತರ ದೇಶಪ್ರೇಮಿಗಳು ಪ್ರಯತ್ನಿಸುತ್ತಿರುವ ಚಿತ್ರ )
ಭಾಗ-XX: ಸಂವಿಧಾನದ ತಿದ್ದುಪಡಿ (ಹಿಮಾಲಯದ ದೃಶ್ಯ)
ಭಾಗ-XXI: ತಾತ್ಕಾಲಿಕ ಮತ್ತು ಬದಲಾವಣೆಯ ನಿಬಂಧನೆಗಳು (ಮರುಭೂಮಿಯ ದೃಶ್ಯ)
ಭಾಗ-XXII: ಸಂಕ್ಷಿಪ್ತ ತಲೆಬರಹ, ಆರಂಭ ಮತ್ತು ಹಿಂಪಡೆಯುವಿಕೆ (ಸಾಗರದ ದೃಶ್ಯ)