ಸುದ್ದಿಗಳು

[ಅಗಸ್ಟಾ ವೆಸ್ಟ್‌ಲ್ಯಾಂಡ್‌] ರಾಜಕುಮಾರಿ ಬದಲಾಗಿ ನನ್ನ ಹಸ್ತಾಂತರ: ದೆಹಲಿ ಹೈಕೋರ್ಟ್‌ಗೆ ಕ್ರಿಶ್ಚಿಯನ್ ಮಿಶೆಲ್

Bar & Bench

ರಾಜಕುಮಾರಿ ಲತೀಫಾ ಬದಲಾಗಿ ನನ್ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ₹3,600 ಕೋಟಿ ಮೊತ್ತದ ವಿವಿಐಪಿ ಹೆಲಿಕಾಪ್ಟರ್‌ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮಿಶೆಲ್‌ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ [ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಮತ್ತು ಸಿಬಿಐ ನಡುವಣ ಪ್ರಕರಣ].

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿದ ಪ್ರಕರಣಗಳಲ್ಲಿ ಮಿಶೆಲ್ ಅವರ ಜಾಮೀನು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ಮುಂದೆ ಮಿಶೆಲ್ ಅವರ ವಕೀಲ ಅಲ್ಜೋ ಜೋಸೆಫ್ ವಾದ ಮಂಡಿಸಿದರು.

ದುಬೈನ ರಾಜಮನೆತನದ ಪುತ್ರಿ ರಾಜಕುಮಾರಿ ಶೇಖಾ ಲತೀಫಾ ಬಿಂತ್ ಮೊಹಮ್ಮದ್ ಅಲ್-ಮಕ್ತೌಮ್, ಅಮೆರಿಕಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಗೋವಾ ಬಳಿ ಭಾರತೀಯ ಕರಾವಳಿ ಕಾವಲು ಪಡೆಗಳ ವಶಕ್ಕೆ ಸಿಕ್ಕಿದ್ದರು. ಅದಾದ ಕೇವಲ ಎಂಟು ತಿಂಗಳಲ್ಲಿ ಅಂದರೆ ಡಿಸೆಂಬರ್ 2018ರಲ್ಲಿ ಮಿಶೆಲ್‌ ಅವರನ್ನು ಭಾರತಕ್ಕೆ ಕರೆತರಲಾಯಿತು. ಅದಕ್ಕೆ ಬದಲಿಯಾಗಿ ಭಾರತ ರಾಜಕುಮಾರಿ ಲತೀಫಾರನ್ನು ಯುಎಇಗೆ ಹಸ್ತಾಂತರಿಸಿತು. ಎಂದು ಜೋಸೆಫ್ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 8ಕ್ಕೆ ನಿಗದಿಯಾಗಿದೆ.