ಯಮುನಾ ಮೆನನ್  
ಸುದ್ದಿಗಳು

ಎನ್‌ಎಲ್‌ಎಸ್‌ಐಯು ಘಟಿಕೋತ್ಸವ: 18 ಚಿನ್ನದ ಪದಕ ಬಾಚಿಕೊಂಡ ‘ಐಡಿಐಎ’ ಪ್ರತಿಭೆ ಯಮುನಾ ಮೆನನ್

ಪ್ರಥಮ ರ್ಯಾಂಕ್ ಚಿನ್ನದ ಪದಕದ ಜೊತೆಗೆ ಯಮುನಾ ಅವರು ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ, ಅತ್ಯುತ್ತಮ ಪದವಿ ವಿದ್ಯಾರ್ಥಿ ಹಾಗೂ ಅತ್ಯುತ್ತಮ ನಿರ್ಗಮಿತ ಮಹಿಳಾ ವಿದ್ಯಾರ್ಥಿ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

Bar & Bench

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ವಾರ್ಷಿಕ ಘಟಿಕೋತ್ಸವದ ಒಟ್ಟು 38 ಪದಕಗಳಲ್ಲಿ 18 ಚಿನ್ನದ ಪದಕಗಳು ಐಡಿಐಎ ವಿದ್ಯಾರ್ಥಿ ವೇತನ ಪಡೆದ ಯಮುನಾ ಮೆನನ್ ಅವರ ಪಾಲಾಗಿವೆ.

ಮೆನನ್ ಅವರು ಐಡಿಐಎ ಸಂಸ್ಥೆಯ ಕೇರಳ ವಿಭಾಗದಿಂದ ವಿದ್ಯಾರ್ಥಿವೇತನ ಪಡೆದಿದ್ದಾರೆ. ಕಾನೂನು ಕ್ಷೇತ್ರಕ್ಕೆ ವೈವಿಧ್ಯಮಯ ಹಿನ್ನೆಲೆಯಿಂದ ಪ್ರತಿಭೆಗಳು ಬರಬೇಕು ಎನ್ನುವ ಉದ್ದೇಶದಿಂದ ಸೇವಾ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ವೈವಿಧ್ಯತೆಯನ್ನು ಹೆಚ್ಚಿಸುವ ಐಡಿಐಎ ಸಂಸ್ಥೆಯ ಉದ್ದೇಶದ ಕುರಿತಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಬರಹವನ್ನು ಗಮನಿಸಿ ಅವರು ಐಡಿಐಎ ಸಂಸ್ಥೆಯೊಡನೆ ಸಂಪರ್ಕಕ್ಕೆ ಬಂದಿದ್ದರು.

ಅಲ್ಲದೆ ಅವರು 2020ರಲ್ಲಿ ಅತಿಹೆಚ್ಚು ಅಂಕ ಪಡೆದ ಕಾನೂನು ಪದವಿ ವಿದ್ಯಾರ್ಥಿನಿಯಾಗಿಯೂ ಹೊರಹೊಮ್ಮಿದ್ದಾರೆ. ಕಾನೂನು ಶಾಲೆಯ 28ನೇ ಘಟಿಕೋತ್ಸವ ಇದಾಗಿದ್ದು ಯಮುನಾ ಅವರು ಪ್ರಥಮ ರ್ಯಾಂಕ್ ಚಿನ್ನದ ಪದಕದ ಜೊತೆಗೆ ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ, ಅತ್ಯುತ್ತಮ ಪದವಿ ವಿದ್ಯಾರ್ಥಿ ಹಾಗೂ ಅತ್ಯುತ್ತಮ ನಿರ್ಗಮಿತ ಮಹಿಳಾ ವಿದ್ಯಾರ್ಥಿ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಸಿಎಲ್ಎಟಿ ಪರೀಕ್ಷೆಯಲ್ಲಿ 28ನೇ ರ್ಯಾಂಕ್ ಗಳಿಸುವ ಮೂಲಕ ಎನ್‌ಎಲ್‌ಎಸ್‌ಐಯುಗೆ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದ ಅವರ ಪ್ರಬಂಧವೊಂದು ಪ್ರತಿಷ್ಠಿತ ಕೇಂಬ್ರಿಜ್ ಲಾ ರಿವ್ಯೂ ಪತ್ರಿಕೆಯಲ್ಲಿ ಪ್ರಕಟವಾಗಿದೆ. ವಿದ್ಯಾರ್ಥಿಗಳೇ ಹೊರತರುವ ಇಂಡಿಯನ್ ಜರ್ನಲ್ ಆಫ್ ಇಂಟರ್ನ್ಯಾಷನಲ್ ಇಕಾನಮಿಕ್ ಲಾ ನಿಯತಕಾಲಿಕದ ಮುಖ್ಯ ಸಂಪಾದಕಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಮೆನನ್ ಅವರು ಕೇಂಬ್ರಿಜ್ ವಿವಿಯ ಟ್ರಿನಿಟಿ ಕಾಲೇಜಿನಲ್ಲಿ ತಮ್ಮ ಉನ್ನತ ವ್ಯಾಸಂಗ ಕೈಗೊಳ್ಳಲಿದ್ದಾರೆ.

ಘಟಿಕೋತ್ಸವದ ಪದಕ ವಿಜೇತರ ಸಂಪೂರ್ಣ ವಿವರ ಇಲ್ಲಿದೆ:

Medal-Winners-Notification-2020.pdf
Preview