ಮಾಂಸಾಹಾರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ ಎನ್ನುವವರಿಗೆ, ಸಸ್ಯಾಹಾರವನ್ನಷ್ಟೇ ಪೂರೈಸುವ ಹೊಟೆಲ್‌ಗಳಿಂದ ಆಹಾರ ತರಿಸಿಕೊಳ್ಳುವ ಆಯ್ಕೆ ಸದಾ ಇರುತ್ತದೆ ಎಂದು ಮುಂಬೈನ ಗ್ರಾಹಕ ನ್ಯಾಯಾಲಯವೊಂದು ಬುದ್ಧಿವಾದ ಹೇಳಿದೆ [ ಗಾರ್ಗಿ ಪ್ರಕಾಶ್ ಜೋಶಿ ಮತ್ತಿತರರು ಹಾಗೂ ವಾವ್ ಮೊಮೊಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ಮಾಂಸಾಹಾರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ತಿಳಿದಿದ್ದರೂ, ಮಾಂಸಾಹಾರಿ ಹೊಟೆಲ್‌ನಿಂದ ಆಹಾರ ತರಿಸಿಕೊಂಡಿದ್ದೇಕೆ ಎಂದು ಇಬ್ಬರು ದೂರುದಾರರನ್ನು ಮುಂಬೈ ಉಪನಗರ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಪ್ರದೀಪ್ ಜಿ ಕಡು ಮತ್ತು ಸದಸ್ಯೆ ಗೌರಿ ಎಂ ಕಪ್ಸೆ ಅವರನ್ನೊಳಗೊಂಡ ಪೀಠ ಕೇಳಿತು.
ಮುಂಬೈನಲ್ಲಿರುವ ವಾವ್ ಮೊಮೊಸ್ ಮಳಿಗೆ ಸಸ್ಯಾಹಾರದ ಬದಲಿಗೆ ಮಾಂಸಾಹಾರಿ "ಸ್ಟೀಮ್ ಡಾರ್ಜಿಲಿಂಗ್ ಚಿಕನ್ ಮೊಮೊಸ್" ನೀಡಿದೆ ಎಂದು ಅರ್ಜಿದಾರರು ದೂರಿದ್ದರು. ಸೇವಾ ಕೊರತೆ, ಮಾನಸಿಕ ಕಿರುಕುಳ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ವಾವ್ ಮೊಮೊಸ್ ₹6 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆದರೆ ದೂರುದಾರರು ಮಾಂಸಾಹಾರವನ್ನೇ ಆರ್ಡರ್ ಮಾಡಿದ್ದರು ಎಂದು ತೋರಿಸುವ ದಾಖಲೆಗಳನ್ನು ವಾವ್ ಮೊಮೊಸ್ ನ್ಯಾಯಾಲಯಕ್ಕೆ ಸಲ್ಲಿಸಿತು. ಪೂಜಾ ಶರ್ಮ ಎಂಬ ಸಿಬ್ಬಂದಿ ಮಾಂಸಾಹಾರ ನೀಡಿದ್ದಾಗಿ ಅರ್ಜಿದಾರರು ದೂರುತ್ತಾರಾದರೂ ಆ ಹೆಸರಿನ ಉದ್ಯೋಗಿ ನಮ್ಮ ಬಳಿ ಕೆಲಸ ಮಾಡುತ್ತಿಲ್ಲ. ದೂರುದಾರರಿಗೆ ಆಹಾರ ಕಳಿಸಿಕೊಟ್ಟಿರುವವರು ಬೇರೆ. ಅಲ್ಲದೆ ನಮ್ಮ ಉದ್ಯೋಗಿಯನ್ನು ಅವರು ನಿಂದಿಸಿದ್ದಾರೆ ಎಂದು ಅದು ಅಳಲು ತೋಡಿಕೊಂಡಿತ್ತು.
ವಾದ ಆಲಿಸಿದ ನ್ಯಾಯಾಲಯ ದೂರುದಾರರು ತಾವು ಆರ್ಡರ್ ಮಾಡಿದ್ದು ಸಸ್ಯಾಹಾರ ಎನ್ನವುದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ. ಇನ್ವಾಯ್ಸ್ ನಲ್ಲಿ ಅವರು ಆರ್ಡರ್ ಅಡಿರುವುದು ಮಾಂಸಾಹಾರವೇ ಎಂದು ದಾಖಲಾಗಿದೆ ಎಂದಿತು.
ದೂರುದಾರರು ಆಹಾರವನ್ನು ಸೇವಿಸುವ ಮೊದಲು ಅದು ಸಸ್ಯಾಹಾರಿಯೇ ಅಥವಾ ಇಲ್ಲವೇ ಎಂಬುದನ್ನು ಗ್ರಹಿಸಲು ಸಾಧ್ಯವಾಗಬೇಕಿತ್ತು ಎಂದು ಕೂಡ ಅಭಿಪ್ರಾಯಪಟ್ಟ ಅದು ದೂರು ವಜಾಗೊಳಿಸುವುದು ಸೂಕ್ತ ಎಂದು ನಿರ್ಧರಿಸಿತು.