<div class="paragraphs"><p>Chhattisgarh High Court</p></div>

Chhattisgarh High Court

 
ಸುದ್ದಿಗಳು

ಅಕ್ರಮ ಸಂಬಂಧದ ಮಗು ಸಹ ಅನುಕಂಪ ಆಧಾರಿತ ನೇಮಕಾತಿಗೆ ಅರ್ಹ: ಛತ್ತೀಸ್‌ಗಢ ಹೈಕೋರ್ಟ್

Bar & Bench

ತಮ್ಮ ತಂದೆಯ ಮರಣದ ನಂತರ ಅನುಕಂಪ ಆಧಾರಿತ ನೇಮಕಾತಿಗೆ ಅಕ್ರಮ ಸಂಬಂಧದಿಂದ ಜನಿಸಿದ ಮಗ ಅಥವಾ ಮಗಳು ಅರ್ಹರಾಗಿರುತ್ತಾರೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪಿಯೂಷ್ ಕುಮಾರ್ ಆಂಚಲ್ ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ].

ತಮ್ಮ ಉತ್ತರಾಧಿಕಾರ ಪ್ರಮಾಣ ಪತ್ರ ಅಮಾನ್ಯ ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಜಿದಾರರೊಬ್ಬರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂಜಯ್ ಕೆ ಅಗರವಾಲ್ ಅವರಿದ್ದ ಪೀಠ ತೀರ್ಪು ನೀಡಿತು.

“ಅಕ್ರಮ ಸಂಬಂಧದಿಂದ ಜನಿಸಿದ ಮಗ/ ಮಗಳು ಕೂಡ ಅನುಕಂಪಾಧಾರಿತ ನೇಮಕಾತಿಗೆ ಅರ್ಹರಾಗಿದ್ದು ಈ ಪ್ರಶ್ನೆಯನ್ನು ಇದಾಗಲೇ ಪರಿಶೀಲಿಸಲಾಗಿದೆ. ಸುಪ್ರೀಂ ಕೋರ್ಟ್‌ ಈ ಬಗ್ಗೆ ಈಗಾಗಲೇ ನಿರ್ಧರಿಸಿದೆ” ಎಂದು ನ್ಯಾಯಾಲಯ ಹೇಳಿತು. ಅರ್ಜಿದಾರರ ತಾಯಿ ಮೃತರ ಮೊದಲ ಪತ್ನಿಯೇ ಎಂಬುದು ವ್ಯಾಜ್ಯ ನಿರ್ಣಯದ ವಿಚಾರವಾಗಿತ್ತು.

ಎರಡನೇ ವಿವಾಹದಿಂದ ಜನಿಸಿದ ಮಕ್ಕಳಿಗೆ ಅನುಕಂಪದ ನೇಮಕಾತಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಏಕ ಸದಸ್ಯ ಪೀಠ ತಮ್ಮ ಹಕ್ಕು ಮತ್ತು ಅರ್ಹತೆಯನ್ನು ಪ್ರತಿನಿಧಿಸಲು ಅನುವಾಗುವಂತೆ ಇಬ್ಬರೂ ಮಕ್ಕಳ ಅರ್ಜಿಗಳನ್ನು ಪರಿಗಣಿಸಬೇಕು. ಆನಂತರ ಅರ್ಹತೆಯನ್ನು ಆಧರಿಸಿ 45 ದಿನಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತು.