Vidhana Soudha
Vidhana Soudha 
ಸುದ್ದಿಗಳು

ಅಧಿವೇಶನದಲ್ಲಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಮಸೂದೆ ಒಳಗೊಂಡು 10 ವಿಧೇಯಕ ಮಂಡನೆ: ಸಚಿವ ಎಚ್‌ ಕೆ ಪಾಟೀಲ್‌

Bar & Bench

ಕಳೆದ ಎರಡು ವರ್ಷಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ 1.85 ಲಕ್ಷ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಸೋಲಾಗಿದೆ. ಇದನ್ನು ಪರಿಗಣಿಸಿ, ವ್ಯಾಜ್ಯಗಳ ನಿರ್ವಹಣೆಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಕಾಯಿದೆ ಜಾರಿ ಮಾಡಲು ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಬುಧವಾರ ತಿಳಿಸಿದ್ದಾರೆ.

ಇಷ್ಟೊಂದು ಪ್ರಕರಣಗಳಲ್ಲಿ ಹಿನ್ನೆಡೆಯಾಗಲು ಸರ್ಕಾರಿ ವ್ಯಾಜ್ಯ ನಿರ್ವಹಣೆಯಲ್ಲಿ ಲೋಪ ಇದೆ. ಇದನ್ನು ಸರಿಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ಕಾಯಿದೆ ಜಾರಿಗೊಳಿಸಲು ವಿಸ್ತೃತ ಚರ್ಚೆಯಾಗಿದೆ. ಕೆಲವೇ ದಿನಗಳಲ್ಲಿ ಕಾಯಿದೆ ಪೂರ್ಣ ಸ್ವರೂಪ ಪಡೆಯಲಿದೆ ಎಂದು ತಿಳಿಸಿದ್ದಾರೆ.

ಬಡವರಿಗೆ ಸಂಬಂಧಿಸಿದ ಪ್ರಕರಣಗಳನ್ನು ಆದ್ಯತೆ ಮೇರೆಗೆ ಆರು ತಿಂಗಳಲ್ಲಿ ಇತ್ಯರ್ಥಪಡಿಸಲು ʼನಾಗರಿಕ ದಂಡ ಸಂಹಿತಾ (ಸಿವಿಲ್‌ ಪ್ರೊಸಿಜರ್‌ ಕೋಡ್‌) ಕಾಯಿದೆʼಗೆ ತಿದ್ದುಪಡಿ ತರುವ ಉದ್ದೇಶ ಹೊಂದಲಾಗಿದೆ ಎಂದೂ ಅವರು ತಿಳಿಸಿದರು.

ಇವುಗಳ ಜೊತೆಗೆ ಜುಲೈ 3ರಿಂದ ಆರಂಭವಾಗ ಅಧಿವೇಶದಲ್ಲಿ ಮತಾಂತರ ನಿಷೇಧ, ಎಪಿಎಂಸಿ ತಿದ್ದುಪಡಿ, ಕರ್ನಾಟಕ ಅಗ್ನಿಶಾಮಕ ತಿದ್ದುಪಡಿ ವಿಧೇಯಕ, ಕರ್ನಾಟಕ ಅನರ್ಹತೆ ನಿಷೇಧ ತಿದ್ದುಪಡಿ ವಿಧೇಯಕ ಒಳಗೊಂಡು ಒಟ್ಟು 10 ಮಸೂದೆಗಳನ್ನು ಮಂಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.