Kerala High Court and Justice VG Arun 
ಸುದ್ದಿಗಳು

ಮಾನಹಾನಿ, ಅವಹೇಳನ, ವಿಭಜನೆ, ವಿನಾಶಕ್ಕೆ ಪತ್ರಿಕೋದ್ಯಮ ಸೀಮಿತಗೊಂಡಿದೆ: ಕೇರಳ ಹೈಕೋರ್ಟ್ ಬೇಸರ

ಮರುನಾದನ್ ಮಲಯಾಳಿ ಯೂಟ್ಯೂಬ್ ವಾಹಿನಿಯಲ್ಲಿ ಶಾಸಕ ಪಿವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಒಳಗೊಂಡ ಸುದ್ದಿ ಪ್ರಕಟಿಸಿದ್ದನ್ನು ಉಲ್ಲೇಖಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

ನಿಖರ ಮತ್ತು ಸಮಗ್ರ ಸುದ್ದಿಗಳನ್ನು ವರದಿ ಮಾಡುವಲ್ಲಿ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದ ವಾಸ್ತವ ಚೌಕಟ್ಟು ಈಗ ನಶಿಸಿಹೋದಂತಿದೆ ಎಂದು ಕೇರಳ ಹೈಕೋರ್ಟ್ ಶುಕ್ರವಾರ ಬೇಸರ ವ್ಯಕ್ತಪಡಿಸಿದೆ [ಶಾಜನ್ ಸ್ಕಾರಿಯಾ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪತ್ರಿಕೋದ್ಯಮಕ್ಕೆ ಮಾರ್ಗದರ್ಶನ ನೀಡುತ್ತಿದ್ದ ನಾಲ್ಕು ಡಬ್ಲ್ಯೂಗಳಾದ ವೂ, ವಾಟ್‌, ವೆನ್‌ ಹಾಗೂ ವೇರ್‌ ( ಯಾರು, ಏನು, ಯಾವಾಗ ಮತ್ತು ಎಲ್ಲಿ) ಎಂಬ ಪ್ರಶ್ನೆಗಳ ಸ್ಥಾನವನ್ನು ನಾಲ್ಕು ಡಿಗಳಾದ ಡಿಫೇಮ್‌, ಡಿನಿಗ್ರೇಟ್‌, ಡ್ಯಾಮ್ನಿಫೈ ಹಾಗೂ ಡೆಸ್ಟ್ರಾಯ್‌ (ಮಾನಹಾನಿ, ಅವಹೇಳನ, ವಿಭಜನೆ, ವಿನಾಶ) ಎಂಬ ಕಲ್ಪನೆಗಳು ತುಂಬಿಕೊಂಡಿವೆ ಎಂದು ನ್ಯಾ. ವಿ ಜಿ ಅರುಣ್‌ ಅವರಿದ್ದು ಪೀಠ ನುಡಿಯಿತು.

" ಯಾರು, ಏನು, ಯಾವಾಗ ಮತ್ತು ಎಲ್ಲಿ ಎಂಬ ಪತ್ರಿಕೋದ್ಯಮದ ನಾಲ್ಕು ಡಬ್ಲ್ಯೂಗಳು ತಮ್ಮ ವರದಿಯಲ್ಲಿ ಪತ್ರಕರ್ತರಿಗೆ ಮಾರ್ಗದರ್ಶನ ನೀಡಲು ಮತ್ತು ಸುದ್ದಿಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ:  ಕೆಲವೊಮ್ಮೆ ಐದನೇ ಪ್ರಶ್ನೆಯಾದ "ಏಕೆ" ಎಂಬುದು ಪತ್ರಕರ್ತರಿಗೆ ಮಾಹಿತಿ ಸಂಗ್ರಹಿಸಲು ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ನಾಲ್ಕು ಡಬ್ಲ್ಯೂಗಳ ಸ್ಥಾನವನ್ನು ನಾಲ್ಕು ಡಿಗಳು ಆಕ್ರಮಿಸಿವೆಯೇ ಎಂಬ ಆಶ್ಚರ್ಯವನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ ಉಂಟುಮಾಡುತ್ತದೆ” ಎಂದು ಪೀಠ ಹೇಳಿದೆ.   

ಮರುನಾದನ್‌ ಮಲಯಾಳಿ ಯೂಟ್ಯೂಬ್ ವಾಹಿನಿಯಲ್ಲಿ ಶಾಸಕ ಪಿವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಒಳಗೊಂಡ ಸುದ್ದಿ ಪ್ರಕಟಿಸಿದ್ದನ್ನು ಉಲ್ಲೇಖಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸುದ್ದಿ ಪ್ರಕಟವಾದ ಬಳಿಕ ವಾಹಿನಿಯ ಸಂಪಾದಕ ಶಾಜನ್‌ ಸ್ಕಾರಿಯಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ- 1989 ಮತ್ತು ಕೇರಳ ಪೊಲೀಸ್ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು..

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Shajan_Scaria_v_State_of_Kerala___Anr___.pdf
Preview