ನ್ಯಾಯಮೂರ್ತಿ ನೀಲಾ ಗೋಖಲೆ
ನ್ಯಾಯಮೂರ್ತಿ ನೀಲಾ ಗೋಖಲೆ 
ಸುದ್ದಿಗಳು

ಪ್ರತಿಭೆಗೆ ಮನ್ನಣೆ ಸಿಗಬೇಕೆ ವಿನಾ ಹುಟ್ಟಿನ ಕಾರಣಕ್ಕೆ ಅಲ್ಲ: ನ್ಯಾ. ನೀಲಾ ಗೋಖಲೆ

Bar & Bench

ವೃತ್ತಿಪರ ಮತ್ತು ವೈಯಕ್ತಿಕ ಬದುಕಿನ ಸೋಪಾನಗಳನ್ನು ಏರಲು ಶ್ರಮಿಸಿದ ನಮ್ಮ ಸುತ್ತಲಿನ ಮಹಿಳೆಯರ ಕಷ್ಟದ ಪರಿಸ್ಥಿತಿಗಳ ಬಗ್ಗೆ ಪುರುಷರು ಸಹಾನುಭೂತಿ ಮತ್ತು ಎಚ್ಚರ ಉಳ್ಳವರಾಗಿರಬೇಕು ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ನೀಲಾ ಗೋಖಲೆ ಕಿವಿಮಾತು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮುಂಬೈ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಕೀಲರ ಸಂಘ ಮಾರ್ಚ್ 7 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಸಾಧನೆಯು ತಮ್ಮ ಪ್ರತಿಭೆ ಮತ್ತು ಆಲೋಚನೆಗಳಿಂದಾಗಿ ಮಹಿಳೆಯರನ್ನು ಗುರುತಿಸಲಾಗುತ್ತದೆಯೇ ಹೊರತು ಅವರ ಲಿಂಗದ ಕಾರಣಕ್ಕಾಗಿ ಅಲ್ಲ ಎನ್ನುವ ಸಂದೇಶವನ್ನು ಭವಿಷ್ಯದ ಪೀಳಿಗೆಗೆ ನೀಡುತ್ತದೆ ಎಂದು ಅವರು ಹೇಳಿದರು.

ನ್ಯಾ. ಗೋಖಲೆ ಅವರ ಭಾಷಣದ ಪ್ರಮುಖಾಂಶಗಳು

  • ಕಠಿಣ ಪರಿಶ್ರಮ, ಆಲೋಚನೆಗಳು ಹಾಗೂ ಪ್ರತಿಭೆ ತಮ್ಮ ಉನ್ನತ ಸ್ಥಾನವನ್ನು ನಿರ್ಣಯಿಸಿದವೇ ವಿನಾ ಅನುವಂಶೀಯತೆಯಲ್ಲ ಎಂಬುದು ಮುಂದಿನ ಪೀಳಿಗೆಗೆ ಯಶಸ್ವಿ ಮಹಿಳೆಯರ ಸಂದೇಶವಾಗಬೇಕಿದೆ.

  • ಪುರುಷರು ತಮ್ಮ ಮಹಿಳಾ ಸಹವರ್ತಿಗಳ ಹೋರಾಟದ ಬಗ್ಗೆ ಹೆಚ್ಚು ಪ್ರಜ್ಞಾಪೂರ್ವಕವಾಗಿರಬೇಕು. ಮಹಿಳೆಯರ ಕಷ್ಟದ ಸ್ಥಿತಿಗಳ ಬಗ್ಗೆ ದಯೆ, ಸಹಾನುಭೂತಿ ಮತ್ತು ಎಚ್ಚರ ಉಳ್ಳವರಾಗಿರಬೇಕು.

  • ಔದ್ಯೋಗಿಕ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆ ಏಕೆ ಕಡಿಮೆ ಇದೆ ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಬೇಕಿದೆ. ಅವರು ತಾರತಮ್ಯಕ್ಕೊಳಗಾದಾಗ, ಅವರನ್ನು ಸಮಾನತೆಯಿಂದ ನಡೆಸಿಕೊಳ್ಳದಿದ್ದಾಗ ನಿರಂತರವಾಗಿ ಕ್ರಮಕ್ಕೆ ಮುಂದಾಗಬೇಕಿದೆ.

  • 'ಸೂಪರ್ ಮಾಮ್' ಅಥವಾ 'ಪರಿಪೂರ್ಣ ಹೆಂಡತಿ' ಆಗುವ ಅಪರಾಧದಿಂದ ಮಹಿಳೆಯರು ಹೊರಬರಬೇಕು.

  • ಮಹಿಳೆಯರು ಸ್ವಯಂ ನಿಂದನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ವೃತ್ತಿಜೀವನ, ಕೆಲಸ ಆನಂದಿಸುತ್ತಾ ಪರಿಪೂರ್ಣ ತಾಯಿ ಅಥವಾ ಪತ್ನಿ ಆಗದೇ ಹೋಗದ ಬಗ್ಗೆ ತಪ್ಪಿತಸ್ಥ ಮನೋಭಾವ ಹೊಂದಿದ್ದೇವೆ. ಅವರು ಅಪರಾಧ ಮನೋಭಾವದಿಂದ ಹೊರಬರುವ ಸಮಯ ಇದು.

  • ನಾವು ಮಾಯಾಲೋಕದಿಂದ ಎದ್ದುಬಂದವರಲ್ಲ ನಾವೂ ಮನುಷ್ಯರೇ.