Justice S Muralidhar  
ಸುದ್ದಿಗಳು

ವಕೀಲ ಸಮುದಾಯದ ಪ್ರತಿಕ್ರಿಯೆಗೆ ನ್ಯಾಯಾಧೀಶರು ಮುಕ್ತವಾಗಿರಬೇಕು: ನ್ಯಾ. ಎಸ್ ಮುರಳೀಧರ್

ಪ್ರತಿಕ್ರಿಯೆಯನ್ನು ಸೂಕ್ತ ಮನೋಭಾವದಿಂದ ಸ್ವೀಕರಿಸಿದರೆ ಪ್ರತಿಕ್ರಿಯೆ ಎಂಬುದು ಸ್ವಯಂ ತಿದ್ದುಪಡಿಗೆ ರೇಚಕವಾಗಬಹುದು ಎಂದು ಅವರು ಒತ್ತಿ ಹೇಳಿದರು.

Bar & Bench

ವಕೀಲ ಸಮುದಾಯದ ಸದಸ್ಯರ ಪ್ರತಿಕ್ರಿಯೆಗೆ ಮುಕ್ತವಾಗಿ ಉಳಿಯುವ ನ್ಯಾಯಾಧೀಶರ ಪ್ರಾಮುಖ್ಯತೆಯನ್ನು ಒಡಿಶಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಹಿರಿಯ ನ್ಯಾಯವಾದಿ ಎಸ್‌ ಮುರಳೀಧರ್‌ ಹೇಳಿದರು.  

ಪ್ರತಿಕ್ರಿಯೆಯನ್ನು ಸೂಕ್ತ ಮನೋಭಾವದಿಂದ ಸ್ವೀಕರಿಸಿದರೆ ಪ್ರತಿಕ್ರಿಯೆ ಎಂಬುದು ಸ್ವಯಂ ತಿದ್ದುಪಡಿಗೆ ರೇಚಕವಾಗಬಹುದು ಎಂದು ಅವರು ಒತ್ತಿ ಹೇಳಿದರು.

“ಖಂಡಿತವಾಗಿಯೂ ವಕೀಲ ಸಮುದಾಯದಿಂದ ನೀವು (ನ್ಯಾಯಾಧೀಶರು) ಪ್ರತಿಕ್ರಿಯೆ ಪಡೆದು ಸ್ವಯಂ ತಿದ್ದುಪಡಿ ಮಾಡಬಹುದು. ಆದರೆ ನೀವು ಅದಕ್ಕೆ ಮುಕ್ತವಾಗಿರಬೇಕು. ಅದು ಬಹಳ ಮುಖ್ಯ ಮತ್ತು ನೀವು ಸೂಕ್ತ ಉಮೇದಿನಲ್ಲಿ ಆ ಬಗೆಯ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗುತ್ತದೆ” ಎಂದರು.

ಶುಕ್ರವಾರ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಕನ್ನಡಿಗ ಎಸ್‌ ರವೀಂದ್ರ ಭಟ್ ಅವರ ಗೌರವಾರ್ಥ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಹಾಲಿ ಹಾಗೂ ನಿವೃತ್ತ ವಕೀಲ ಗುಮಾಸ್ತರು ಹಮ್ಮಿಕೊಂಡಿದ್ದ 'ನ್ಯಾಯ ಕುರಿತ ಸಂವಾದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ, ಯು ಯು ಲಲಿತ್‌ ಎಸ್ ಮುರಳೀಧರ್, ಬದರ್ ಅಹ್ಮದ್, ಆರ್ ಬಸಂತ್, ಹಿರಿಯ ವಕೀಲ ರಾಜು ರಾಮಚಂದ್ರನ್ ಹಾಗೂ ವಕೀಲೆ ಮಾಳವಿಕಾ ಪ್ರಸಾದ್ ಅವರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ನ್ಯಾ. ಲಲಿತ್‌ ಮಾತನಾಡಿದರು.

ವಕೀಲರ ಪ್ರತಿಕ್ರಿಯೆ ಕುರಿತು ರಾಮಚಂದ್ರನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುರಳೀಧರ್, ಪ್ರತಿಕ್ರಿಯೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು ವಕೀಲ ವರ್ಗದಿಂದಲಷ್ಟೇ ಅಲ್ಲದೆ ಕಾರ್ಯದರ್ಶಿ ಸಿಬ್ಬಂದಿ ಮತ್ತು ಸ್ಟೆನೋಗ್ರಾಫರ್‌ಗಳು ಸೇರಿದಂತೆ ವಿವಿಧ ಮೂಲಗಳಿಂದ ಆ ಪ್ರತಿಕ್ರಿಯೆ ಬರಬಹುದು ಎಂದು ಅವರು ಹೇಳಿದರು.

ಅಲ್ಲದೆ, ಅಗತ್ಯ ಬದಲಾವಣೆಗಳನ್ನು ತರುವ ಮತ್ತು ಸ್ಥಾಪಿತ ಕಾನೂನು ಮಾನದಂಡ ನಿರ್ವಹಿಸುವುದರ ನಡುವೆ ಸರಿಯಾದ ಸಮತೋಲನ ಸಾಧಿಸುವುದರ ಹಿಂದಿನ ಸವಾಲನ್ನು ಅವರು ಚರ್ಚಿಸಿದರು