Justice BV Nagarathna 
ಸುದ್ದಿಗಳು

ಸುಪ್ರೀಂ ಕೋರ್ಟ್ ಲಿಂಗ ಸಂವೇದನೆ ಮತ್ತು ಆಂತರಿಕ ದೂರು ಸಮಿತಿ ನೂತನ ಅಧ್ಯಕ್ಷರಾಗಿ ನ್ಯಾ. ಬಿ ವಿ ನಾಗರತ್ನ ನೇಮಕ

ಲಿಂಗ ಸಂವೇದನಾಶೀಲತೆ ವೃದ್ಧಿಗೊಳಿಸಲು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬಹುದಾದ ಲೈಂಗಿಕ ಕಿರುಕುಳದ ದೂರು ಸ್ವೀಕರಿಸಲು 2013 ರಲ್ಲಿ ಸಮಿತಿ ರಚನೆಯಾಗಿತ್ತು.

Bar & Bench

ಸುಪ್ರೀಂ ಕೋರ್ಟ್ ಲಿಂಗ ಸಂವೇದನೆ ಮತ್ತು ಆಂತರಿಕ ದೂರು ಸಮಿತಿ ನೂತನ ಅಧ್ಯಕ್ಷರಾಗಿ ನ್ಯಾ. ಬಿ ವಿ ನಾಗರತ್ನ ಅವರನ್ನು ನೇಮಕ ಮಾಡಲಾಗಿದೆ.

ಈ ಸಂಬಂಧ ಬುಧವಾರ ಕಚೇರಿ ಆದೇಶ ಹೊರಡಿಸಲಾಗಿದೆ. ನ್ಯಾ. ಹಿಮಾ ಕೊಹ್ಲಿ ಅವರು ಈಚೆಗೆ ನಿವೃತ್ತರಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು.

ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ , ಹಿರಿಯ ವಕೀಲೆ ಮತ್ತು ಸಂಸದೆ ಬಾನ್ಸುರಿ ಸ್ವರಾಜ್ ಹಾಗೂ ಮತ್ತೊಬ್ಬ ವಕೀಲೆ ಸಾಕ್ಷಿ ಬಂಗಾ ಸಮಿತಿಯ ಉಳಿದ ಹೊಸ ಸದಸ್ಯರು.

ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಮತ್ತು ವಕೀಲೆ ನೀನಾ ಗುಪ್ತಾ ಅವರು ಸುಪ್ರೀಂ ಕೋರ್ಟ್ ವಕೀಲರ ಸಂಘವನ್ನು ಸಮಿತಿಯಲ್ಲಿ ಪ್ರತಿನಿಧಿಸುವ ಸದಸ್ಯರಾಗಿ ಮುಂದುವರೆದಿದ್ದಾರೆ.

ಲಿಂಗ ಮತ್ತು ಸಾಮಾಜಿಕ ನ್ಯಾಯದ ಜೊತೆಗೆ ಮಹಿಳಾ ಸಬಲೀಕರಣದ ಕಾರಣಕ್ಕೆ ಸರ್ಕಾರೇತರ ಸಂಸ್ಥೆಗಳೊಂದಿಗಿನ ನಂಟಿಗಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ನಾಮನಿರ್ದೇಶನ ಮಾಡುವ ಬಾಹ್ಯ ಸದಸ್ಯರ ವರ್ಗದ ಅಡಿಯಲ್ಲಿ ಮೇನಕಾ ಅವರು ಈ ಹಿಂದೆ ಸಮಿತಿಯ ಭಾಗವಾಗಿದ್ದರು. ಹೊಸ ಸಮಿತಿಯಲ್ಲಿ ಆ ಸ್ಥಾನ ಬಾನ್ಸುರಿ ಸ್ವರಾಜ್‌ ಅವರಿಗೆ ದೊರೆತಿದೆ.

ಸಮಿತಿಯ ಉಳಿದ ಸದಸ್ಯರು:

ಡಾ.  ಸುಖದಾ ಪ್ರೀತಮ್ , ಹೆಚ್ಚುವರಿ ರಿಜಿಸ್ಟ್ರಾರ್

ವಕೀಲೆ  ಸೌಮ್ಯಜಿತ್ ಪಾಣಿ  (ಎಸ್‌ಸಿಬಿಎ ಪ್ರತಿನಿಧಿ)

ವಕೀಲೆ ಅನಿಂದಿತಾ ಪೂಜಾರಿ  (ಸುಪ್ರೀಂ ಕೋರ್ಟ್ ಅಡ್ವೊಕೇಟ್-ಆನ್-ರೆಕಾರ್ಡ್ ಸಂಘದ  ಪ್ರತಿನಿಧಿ)

ಮಧು ಚೌಹಾಣ್  (ಸುಪ್ರೀಂ ಕೋರ್ಟ್ ವಕೀಲರ ಸಂಘದ ಗುಮಾಸ್ತರ ಸಂಘದ ಪ್ರತಿನಿಧಿ)

ಹಿರಿಯ ವಕೀಲರಾದ  ಜೈದೀಪ್ ಗುಪ್ತಾ  (ಎಸ್‌ಸಿಬಿಎ ಹಿರಿಯ ಸದಸ್ಯ)

ಲೆನಿ ಚೌಧುರಿ  (ಚಿಕಾಗೋ ವಿಶ್ವವಿದ್ಯಾಲಯದ ಭಾರತೀಯ ಕೇಂದ್ರ ಪ್ರೈ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ)

ಲಿಂಗ ಸಂವೇದನೆ ವೃದ್ಧಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬಹುದಾದ ಲೈಂಗಿಕ ಕಿರುಕುಳದ ದೂರು ಸ್ವೀಕರಿಸಲು 2013 ರಲ್ಲಿ ಸಮಿತಿ ರಚನೆಯಾಗಿತ್ತು.