ದೆಹಲಿ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿಗೆ ಇಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಪ್ರಮಾಣ ವಚನ ಬೋಧಿಸಿದರು.
ಬಳಿಕ ಮಾತನಾಡಿದ ನ್ಯಾ. ಗಂಜು ಅವರು “ಕಾನೂನು ಪಾಂಡಿತ್ಯ, ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಶ್ರೀಮಂತ ಪರಂಪರೆಗಾಗಿ ಕರ್ನಾಟಕ ಹೈಕೋರ್ಟ್‌ನ ಖ್ಯಾತಿಯು ಸ್ಪೂರ್ತಿದಾಯಕವಾಗಿದೆ. ಈ ಘನ ಸಂಸ್ಥೆಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಸಂಕಲ್ಪದೊಂದಿಗೆ ನಾನು ಈ ಹೊಸ ಜವಾಬ್ದಾರಿಗೆ ಹೆಗಲು ಕೊಡುತ್ತೇನೆ” ಎಂದರು.
“ಈ ಹೊಸ ಅಧ್ಯಾಯವು ನ್ಯಾಯವನ್ನು ಎತ್ತಿಹಿಡಿಯಲು ಮೀಸಲಾಗಿರಲಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಹೃದಯಭಾಗದಲ್ಲಿರುವ ನ್ಯಾಯಸಮ್ಮತತೆ, ಸಮಗ್ರತೆ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಎತ್ತಿಹಿಡಿಯಲು ನಾನು ಎದುರು ನೋಡುತ್ತಿದ್ದೇನೆ” ಎಂದರು.
ಕೇಂದ್ರ ಸರ್ಕಾರವು ಅಕ್ಟೋಬರ್ 14ರಂದು ನ್ಯಾ. ವಿತಾಸ್ತ ಗಂಜು ಅವರನ್ನು ವರ್ಗಾವಣೆ ಮಾಡಿ ಅಧಿಸೂಚನೆ ಪ್ರಕಟಿಸಿತ್ತು. 2022ರ ಮೇ 18ರಂದು ನ್ಯಾ. ಗಂಜು ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.