Karnataka HC, liverdoc, X and Himalaya Wellness 
ಸುದ್ದಿಗಳು

ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡುವವರೆಗೂ ಲಿವರ್‌ಡಾಕ್‌ ಎಕ್ಸ್‌ ಖಾತೆ ಚಾಲ್ತಿ ಮಧ್ಯಂತರ ಆದೇಶ ಮುಂದುವರಿಕೆ

ಅಕ್ಟೋಬರ್‌ 10ರಂದು ಹೈಕೋರ್ಟ್‌ ಮಾಡಿರುವ ಮಧ್ಯಂತರ ಆದೇಶ ಮುಂದುವರಿಕೆಗೆ ಸಂಬಂಧಿಸಿದಂತೆ ಡಾ. ಫಿಲಿಪ್ಸ್‌ ಅವರು ಯಾವುದೇ ಮುಚ್ಚಳಿಕೆ ನೀಡಿದರೂ ಅದು ಪ್ರಕರಣದಲ್ಲಿ ಪರಿಹಾರ ಅಥವಾ ವಾದಕ್ಕೆ ಪೂರ್ವಾಗ್ರಹ ಉಂಟು ಮಾಡುವುದಿಲ್ಲ ಎಂದಿರುವ ನ್ಯಾಯಾಲಯ.

Bar & Bench

ಫಾರ್ಮಾ ಕಂಪೆನಿ ಹಿಮಾಲಯ ವೆಲ್‌ನೆಸ್‌ ದಾಖಲಿಸಿದ್ದ ಮಾನಹಾನಿ ದಾವೆಯ ಭಾಗವಾಗಿ ದ ಲಿವರ್‌ ಡಾಕ್ಟರ್‌ ಎಂದೇ ಪ್ರಸಿದ್ಧಿಯಾಗಿರುವ ಯಕೃತ್‌ ವೈದ್ಯ (ಹೆಪಟಾಲಜಿಸ್ಟ್‌) ಡಾ. ಸಿರಿಯಾಕ್‌ ಅಬ್ಬಿ ಫಿಲಿಪ್ಸ್‌ ಅವರ ಎಕ್ಸ್‌ ಖಾತೆ ನಿರ್ಬಂಧಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಇತ್ಯರ್ಥಪಡಿಸಿದೆ.

ಡಾ. ಫಿಲಿಪ್ಸ್‌ ಅವರ ಎಕ್ಸ್‌ ಕಾರ್ಪ್‌ ಖಾತೆಗೆ ನಿರ್ಬಂಧ ವಿಧಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ತೆರವುಗೊಳಿಸಿ ನೀಡಿದ್ದ ಮಧ್ಯಂತರ ಆದೇಶವು ವಿಚಾರಣಾಧೀನ ನ್ಯಾಯಾಲಯವು ದಾವೆ ಇತ್ಯರ್ಥಪಡಿಸುವವರೆಗೂ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಅಕ್ಟೋಬರ್‌ 10ರಂದು ಹೈಕೋರ್ಟ್‌ ಮಾಡಿರುವ ಮಧ್ಯಂತರ ಆದೇಶ ಮುಂದುವರಿಕೆಗೆ ಸಂಬಂಧಿಸಿದಂತೆ ಡಾ. ಫಿಲಿಪ್ಸ್‌ ಅವರು ಯಾವುದೇ ಮುಚ್ಚಳಿಕೆ ನೀಡಿದರೂ ಅದು ಪ್ರಕರಣದಲ್ಲಿ ಪರಿಹಾರ ಅಥವಾ ವಾದಕ್ಕೆ ಪೂರ್ವಾಗ್ರಹ ಉಂಟು ಮಾಡುವುದಿಲ್ಲ ಎಂದು ಪೀಠ ಹೇಳಿದ್ದು, ಇದು ಹಿಮಾಲಯ ಸಂಸ್ಥೆಯ ವಾದ ಮತ್ತು ಪರಿಹಾರಕ್ಕೂ ಯಾವುದೇ ಪೂರ್ವಾಗ್ರಹ ಉಂಟು ಮಾಡುವುದಿಲ್ಲ ಎಂದಿದೆ.

ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದ ಮುಂದೆ ದಾವೆ ಮುಂದುವರಿಸುವಂತೆ ಸೂಚಿಸಿರುವ ಹೈಕೋರ್ಟ್‌ ಅರ್ಜಿ ಇತ್ಯರ್ಥಪಡಿಸಿದೆ.

ಹಿಮಾಲಯ ವೆಲ್‌ನೆಸ್‌ ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಮಾಡಿರುವ ಟ್ವೀಟ್‌ಗಳನ್ನು ಡಾ. ಫಿಲಿಪ್ಸ್‌ ಅವರು ಕಾಣದಂತೆ ಮಾಡಬೇಕು. ಇದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿರುವುದರಿಂದ ಖಾತೆ ಪುನರ್‌ ಸ್ಥಾಪನೆ ಸಂಬಂಧಿಸಿದ ಮಧ್ಯಂತರ ಅರ್ಜಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.