ಬಕೆಟ್ ನೀರಿಗೆ ಬೀಳಿಸಿ ತನ್ನ ನವಜಾತ ಶಿಶುವನ್ನು ಕೊಂದ ಆರೋಪ ಎದುರಿಸುತ್ತಿದ್ದ ಮಹಿಳೆಯೊಬ್ಬರಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಸಂದರ್ಭ ಸನ್ನಿವೇಶ ಮತ್ತು ಆಕೆ ಅಂಗವಿಕಲೆ ಎಂಬುದನ್ನು ಗಮನಿಸಿರುವ ನ್ಯಾಯಾಲಯ ಒಂದು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿರುವುದನ್ನು ಪರಿಗಣಿಸಿ ಆಕೆಗೆ ಜಾಮೀನು ನೀಡಬಹುದು ಎಂದು ಹೇಳಿದೆ. ಮಗುವನ್ನು ತಾನು ಬೀಳಿಸಿಲ್ಲ. ಆರನೆಯ ಮಗುವಾದ ನವಜಾತ ಶಿಶುವನ್ನು ತನ್ನ ಮಕ್ಕಳಲ್ಲಿ ಒಬ್ಬರಿಗೆ ಕೊಟ್ಟು ಸ್ನಾನ ಮಾಡಿಸಲು ಹೇಳಿದ್ದೆ. ಆದರೆ ಹಾಗೆ ಮಾಡುವಾಗ ಮಗು ಆಕಸ್ಮಿಕವಾಗಿ ಕೈ ಜಾರಿ ನೀರಿನಲ್ಲಿ ಬಿತ್ತು ಎಂಬುದು ನಿಶಾ ಅವರ ವಾದವಾಗಿತ್ತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼನ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.