Kesavananda Bharati Sripadagalvaru 
ಸುದ್ದಿಗಳು

ಇಹಲೋಕ ತ್ಯಜಿಸಿದ ಕೇಶವಾನಂದ ಭಾರತಿ ಸ್ವಾಮೀಜಿ

ಕೇರಳದ ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ ಶನಿವಾರ ರಾತ್ರಿ 12.25ರ ಸುಮಾರಿಗೆ ಕೃಷ್ಣೈಕ್ಯರಾದರು. ಸ್ವಾಮೀಜಿಗೆ 79 ವರ್ಷ ವಯಸ್ಸಾಗಿತ್ತು.

Bar & Bench

ಕೇರಳದ ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ ಶನಿವಾರ ರಾತ್ರಿ 12.25ರ ಸುಮಾರಿಗೆ ಕೃಷ್ಣೈಕ್ಯರಾದರು. ಸ್ವಾಮೀಜಿಗೆ 79 ವರ್ಷ ವಯಸ್ಸಾಗಿತ್ತು.

ಕೇಶವಾನಂದ ಭಾರತಿ ಶ್ರೀಪಾದಗಳವರು vs ಕೇರಳ ರಾಜ್ಯ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಸ್ವಾಮೀಜಿ ಅವರು ಎಡನೀರು ಮಠದ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ 1973ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಆ ಮೂಲಕ ಸಂವಿಧಾನದ ಅಡಿ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲು ಕಾರಣರಾಗಿದ್ದರು.

2018ರಲ್ಲಿ ಕೇಶವಾನಂದ ಭಾರತಿ ಸ್ವಾಮೀಜಿ ಅವರಿಗೆ ನ್ಯಾಯಮೂರ್ತಿ ವಿ ಆರ್ ಕೃಷ್ಣ ಐಯ್ಯರ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್‌ ನಲ್ಲಿ ಸುದೀರ್ಘವಾಗಿ ವಿಚಾರಣೆಗೆ ಒಳಪಟ್ಟ ಪ್ರಕರಣಗಳಲ್ಲಿ ಕೇಶವಾನಂದ ಭಾರತಿ v. ಕೇರಳ ರಾಜ್ಯಕ್ಕೆ ಅಗ್ರಸ್ಥಾನವಿದೆ. ಇದರ ನಂತರದ ಸ್ಥಾನ ಅಯೋಧ್ಯಾ ಪ್ರಕರಣಕ್ಕಿದೆ. ಕೇಶವಾನಂದ ಭಾರತೀ ಸ್ವಾಮೀಜಿ ಪ್ರಕರಣವು 68 ದಿನಗಳ ನಿರಂತರ ವಿಚಾರಣೆಗೆ ಒಳಪಟ್ಟಿತ್ತು. 1972ರ ಅಕ್ಟೋಬರ್ 31ರಂದು ಆರಂಭವಾದ ವಿಚಾರಣೆಯು 1973ರ ಮಾರ್ಚ್ 23ರಂದು ಪೂರ್ಣಗೊಂಡಿತ್ತು.