ಮಹತ್ವದ ಬೆಳವಣಿಗೆಯೊಂದರಲ್ಲಿ ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಪ್ರದೇಶದಲ್ಲಿ ನಿರ್ಮಿಸಿರುವುದರಿಂದ ಅದನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ವಿಚಾರಣಾ ನಿರ್ವಹಣಾ ಯೋಗ್ಯ ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ.
ಈ ಹಿಂದೆ ಮೊಕದ್ದಮೆ ವಜಾಗೊಳಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ಜಿಲ್ಲಾ ನ್ಯಾಯಾಧೀಶ ರಾಜೀವ್ ಭಾರ್ತಿ ರದ್ದುಗೊಳಿಸಿದರು.
"ಫಿರ್ಯಾದಿದಾರ ಮೊಕದ್ದಮೆ ಹೂಡುವ ಹಕ್ಕನ್ನು ಊರ್ಜಿತಗೊಳಿಸಲಾಗಿದೆ. ಪ್ರಕರಣವನ್ನು ಅದರ ಮೂಲ ಸಂಖ್ಯೆಗೆ ಮರಳಿಸಲಾಗುವುದು" ಎಂದು ನ್ಯಾಯಾಲಯ ಆದೇಶಿಸಿದೆ.
ವಜಾ ಆದೇಶ ಪ್ರಶ್ನಿಸಿ ಹಿಂದೂ ದೇವತೆಗಳಾದ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಮತ್ತು ಆಸ್ಥಾನ ಶ್ರೀ ಕೃಷ್ಣ ಜನ್ಮಭೂಮಿ ಪರವಾಗಿ ವಾದ ಮಿತ್ರರಾದ ರಂಜನಾ ಅಗ್ನಿಹೋತ್ರಿ ಮತ್ತಿತರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.