ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |20-3-2021

Bar & Bench

ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಾಹ ನೋಂದಣಿಗೆ ಅವಕಾಶ ನೀಡಿದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌

ವಿಶೇಷ ವಿವಾಹ ಕಾಯಿದೆಯಡಿ ಮದುವೆ ನೋಂದಣಿ ಬಯಸಿದ್ದ ಅಮೆರಿಕದ ದಂಪತಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಾಹ ನೋಂದಣಿ ಮಾಡಿಕೊಳ್ಳಲು ಪಂಜಾಬ್‌ ಮತ್ತು ಹರಿಯಾಣ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ನ್ಯಾಯಮೂರ್ತಿಗಳಾದ ರಿತು ಬಹಾರಿ ಮತ್ತು ಅರ್ಚನಾ ಪುರಿಯ ಅವರಿದ್ದ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ನಿಯ ಉಪಸ್ಥಿತರಿರಬಹುದಾಗಿದ್ದು ಆಕೆ ಭಾರತೀಯ ಹೈ ಕಮಿಷನ್‌ ಅಥವಾ ಅಮೆರಿಕದ ನೋಂದಾಯಿತ ಆಸ್ಪತ್ರೆಯಿಂದ ಹಾಜರಾಗಬಹುದು ಎಂದು ತಿಳಿಸಿದೆ.

Marriage

ಆ ಮೂಲಕ, ವಿವಾಹ ನೋಂದಣಾಧಿಕಾರಿ ಎದುರು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗದು ಎಂಬ ನೆಲೆಯಲ್ಲಿ ವಿವಾಹದ ಇ- ನೋಂದಣಿಯನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ರದ್ದುಪಡಿಸಿತು. ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿ ಪ್ರಸ್ತುತ ಭಾರತದಲ್ಲಿ ನೆಲೆಸಿದ್ದಾರೆ. ಆದರೆ ಅವರ ಪತ್ನಿ ಅಮೆರಿಕದ ವರ್ಜೀನಿಯಾ ವಿವಿ ವೈದ್ಯಕೀಯ ಶಾಲೆಯಲ್ಲಿ ನಿಲಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾರ್ಚ್ 27 ರಂದು ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್

ಮಾರ್ಚ್ 27 ರಂದು ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‍ಲೈನ್/ವಿಡಿಯೋ ಕಾನ್ಫರೆನ್ಸ್/ಇ-ಮೇಲ್/ಎಸ್ಎಂಎಸ್ /ವಾಟ್ಸಾಪ್‌/ಎಲೆಕ್ಟ್ರಾನಿಕ್ ಮೋಡ್ /ಖುದ್ದಾಗಿ ಹಾಜರಾಗುವ ಮುಖಾಂತರ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Mega lok Adalat

ಹೆಚ್ಚಿನ ಮಾಹಿತಿಗಾಗಿ: ನ್ಯಾಯ ಸಂಯೋಗ, ಕಾನೂನು ನೆರವು ಘಟಕ (ಬಹುವಿಧ ಸೇವೆಗಳು - ಒಂದೇ ಸೂರಿನ ಅಡಿಯಲ್ಲಿ) ‘ನ್ಯಾಯ ದೇಗುಲ’, ಮೊದಲನೇ ಮಹಡಿ, ಹೆಚ್ ಸಿದ್ಧಯ್ಯ ರಸ್ತೆ, ಬೆಂಗಳೂರು-560027, ದೂರವಾಣಿ ಸಂಖ್ಯೆ: 080-22111730 ಜಾಲತಾಣ: www.kslsa.kar.nic.in ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಸಹಾಯವಾಣಿ ಸಂಖ್ಯೆ: 1800-425-90900 ಮೂಲಕ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವೃದ್ಧ ದಂಪತಿ ಕೊಲೆ: ಆರೋಪಿಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌

ವೃದ್ಧ ದಂಪತಿಯನ್ನು ಅವರ ಮಗಳು ಮತ್ತು ಆಕೆಯ ಪ್ರಿಯಕರ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರಿಗೆ ದೆಹಲಿ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ. ನ್ಯಾ ಸುಬ್ರಮೊಣಿಯಂ ಪ್ರಸಾದ್‌ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರಾದ ರಾಘವೇಂದರ್‌ ಸಿಂಗ್ ಮೇಲೆ ಜೋಡಿ ಕೊಲೆಯ ಆರೋಪ ಇದೆ. ಅರ್ಜಿದಾರರ ಮನೆಯಲ್ಲಿ ಸಿಕ್ಕ ವಸ್ತುವೊಂದು ಮೃತರೊಬ್ಬರಿಗೆ ಸೇರಿದ್ದಾಗಿದೆ. ಅವುಗಳನ್ನು ಮೃತಪಟ್ಟವರ ಮಗ ಗುರುತಿಸಿದ್ದಾರೆ. ಅರ್ಜಿದಾರರು ಇಬ್ಬರು ಪ್ರಧಾನ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು‌ʼ ಎಂದು ತಿಳಿಸಿದೆ.

Murder

2019 ರಲ್ಲಿ ಆಸ್ತಿ ಆಸೆಗಾಗಿ ಮೃತರ ಮಗಳು ದೇವಿಂದರ್‌ ಕೌರ್‌ ತನ್ನ ಪ್ರಿಯಕರ ಪ್ರಿನ್ಸ್‌ ದಿಕ್ಷಿತ್‌ ಜೊತೆ ಸೇರಿ ತನ್ನ ತಂದೆ ತಾಯಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಇಬ್ಬರು ದಿವಾಕರ್‌ ಮತ್ತು ರಾಘವೇಂದರ್ ಸಿಂಗ್ ಎನ್ನುವವರಿಗೆ ಕೊಲೆ ಮಾಡಲು ರೂ. 50 ಸಾವಿರ ಹಣದ ಆಮಿಷ ಒಡ್ಡಿದ್ದು, ಹಣ ಪಡೆದ ಆರೋಪಿಗಳು ಕೊಲೆ ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದರು. ಮೃತರನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಒಳಚರಂಡಿಗೆ ಎಸೆಯಲಾಗಿತ್ತು. ದೀಕ್ಷಿತ್‌ ಮನೆಯಲ್ಲಿ ಮೃತೆ ಗುರ್ಮಿತ್‌ ಕೌರ್‌ ಅವರ ಕಿವಿಯೋಲೆ ಸಿಕ್ಕಿದ್ದನ್ನು ಸಾಕ್ಷ್ಯವನ್ನಾಗಿ ನ್ಯಾಯಾಲಯ ಪರಿಗಣಿಸಿದೆ. ಪ್ರಕರಣ ಆರಂಭಿಕ ಹಂತದಲ್ಲಿದ್ದು ಆರೋಪವನ್ನು ಇನ್ನಷ್ಟೇ ನಿಗದಿಪಡಿಸಬೇಕಿದೆ. ಸಾಕ್ಷ್ಯ ನಾಶ ಮತ್ತು ಕಾನೂನಿನ ಎಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆರೋಪಿಯಲ್ಲಿ ಒಬ್ಬನಾದ ರಾಘವೇಂದರ್ ಸಿಂಗ್‌ಗೆ ಜಾಮೀನು ನಿರಾಕರಿಸಲಾಗಿದೆ.